ಬುಧವಾರ, ಅಕ್ಟೋಬರ್ 16, 2019
28 °C

ಕುಂಬ್ಳೆ ವಿರುದ್ಧ ಅರ್ಜಿ: ಇಂದು ವಿಚಾರಣೆ

Published:
Updated:

ಬೆಂಗಳೂರು: ಕ್ರಿಕೆಟ್ ಪಟು ಅನಿಲ್ ಕುಂಬ್ಳೆ ಹಾಗೂ ಅವರ ಪತ್ನಿ ಚೇತನಾರ ಮೊದಲ ಪತಿ ಕುಮಾರ ಜಹಗೀರದಾರ್ ವಿರುದ್ಧ ಹೈಕೋರ್ಟ್‌ನಲ್ಲಿ ಇನ್ನೊಂದು ಸುತ್ತಿನ ಕಾನೂನು ಸಮರ ಆರಂಭವಾಗಿದೆ.ತಮ್ಮ ಪುತ್ರಿ ಆರುಣಿಯ ಸುಪರ್ದಿಗೆ ಸಂಬಂಧಿಸಿದಂತೆ ಚೇತನಾ ಹಾಗೂ ಕುಂಬ್ಳೆ ವಿರುದ್ಧ ಸುದೀರ್ಘ ಕಾನೂನು ಸಮರ ಸಾರಿರುವ ಜಹಗೀರದಾರ್ ಅವರು ಈಗ ಕುಂಬ್ಳೆ ವಿರುದ್ಧ `ಫೋರ್ಜರಿ~ ಆರೋಪ ಹೊರಿಸಿದ್ದಾರೆ.ಆರುಣಿಯ ಪಾಸ್‌ಪೋರ್ಟ್‌ಗೆ ತಮ್ಮ ನಕಲಿ ಸಹಿ ಹಾಕುವ ಮೂಲಕ ಅದನ್ನು ಕುಂಬ್ಳೆ ನವೀಕರಿಸಿದ್ದಾರೆ ಎನ್ನುವುದು ಇವರ ಆರೋಪ. ನಿಯಮದ ಅನುಸಾರ ಸ್ವಂತ ತಂದೆ ಪಾಸ್‌ಪೋರ್ಟ್‌ಗೆ ಸಹಿ ಹಾಕಬೇಕು ಎನ್ನುವುದು ಅವರ ವಾದ.ಸುಪ್ರೀಂಕೋರ್ಟ್ ಕೂಡ ಚೇತನಾ ಹಾಗೂ ತಾವು ಆರುಣಿಯ ಪೋಷಕರು ಎಂದು ತಿಳಿಸಿದೆ. ಇದನ್ನು ಪರಿಗಣನೆಗೆ ತೆಗೆದುಕೊಂಡರೂ ತಮ್ಮದೇ ಸಹಿ ಪಾಸ್‌ಪೋರ್ಟ್‌ನಲ್ಲಿ ಇರಬೇಕು. ಆದರೆ ನಕಲಿ ಸಹಿ ಹಾಕುವ ಮೂಲಕ ಕುಂಬ್ಳೆ ವಂಚನೆ ಮಾಡಿದ್ದಾರೆ ಎಂದಿರುವ ಅವರು, ಕುಂಬ್ಳೆ ವಿರುದ್ಧ ಕ್ರಮಕ್ಕೆ ಆದೇಶಿಸುವಂತೆ ಕೋರಿದ್ದಾರೆ.10 ದಿನಗಳ ಹಿಂದೆ ಇದೇ ಆರೋಪ ಮಾಡಿ ಅವರು ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸ್ದ್ದಿದಾರೆ. ಇದರ ವಿಚಾರಣೆ ಶುಕ್ರವಾರ ಕೋರ್ಟ್ ಮುಂದೆ ಬರಲಿದೆ.

Post Comments (+)