ಕುಕ್ಕೆ ದೇವಸ್ಥಾನಕ್ಕೆ ಚಿನ್ನದ ಬಾಗಿಲು

ಮಂಗಳವಾರ, ಮೇ 21, 2019
23 °C

ಕುಕ್ಕೆ ದೇವಸ್ಥಾನಕ್ಕೆ ಚಿನ್ನದ ಬಾಗಿಲು

Published:
Updated:

ಸುಬ್ರಹ್ಮಣ್ಯ: ಯು.ಬಿ. ಗುಂಪಿನ ಮಾಲೀಕ ವಿಜಯ ಮಲ್ಯ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ಬಾಗಿಲನ್ನು ಗುರುವಾರ ಸಮರ್ಪಿಸಲಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದ ವಿಜಯ ಮಲ್ಯ, ಚಿನ್ನದ ಬಾಗಿಲನ್ನು  ದೇವರಿಗೆ ಅರ್ಪಿಸುವ ಸಂಕಲ್ಪ ಮಾಡಿದ್ದರು. ಅದೇ ರೀತಿ ಸುಮಾರು 80 ಲಕ್ಷ ರೂಪಾಯಿ ಮೌಲ್ಯದ ಎರಡೂವರೆ ಕೆ.ಜಿ ತೂಕದ ಸ್ವರ್ಣದ್ವಾರ ಸಿದ್ಧವಾಗಿದೆ.ಚಿನ್ನದ ನಾಜೂಕಾದ ಕೆಲಸವನ್ನು ಕಾರ್ಕಳ ತಾಲ್ಲೂಕಿನ ಮಾಳದ ಸುಧಾಕರ ಡೋಂಗ್ರೆ ಮತ್ತು ತಂಡದವರು  ಎರಡು ತಿಂಗಳಿನಿಂದ ಮಾಡಿದ್ದಾರೆ. ಈ ಚಿನ್ನದ ದ್ವಾರವನ್ನು ದೇವಸ್ಥಾನ ಗರ್ಭಗುಡಿಯ ಹೊರಗಿನ ಮಂಟಪದ ಬಾಗಿಲಿಗೆ ಹೊದಿಸಲಾಗುವುದು.ವಿಜಯ ಮಲ್ಯರು ಮಂಗಳೂರು ವಿಮಾನ ನಿಲ್ದಾಣದಿಂದ ಸುಳ್ಯಕ್ಕೆ ಮಧ್ಯಾಹ್ನ 2.30ಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದು, ಮಹಾತ್ಮ ಗಾಂಧಿ ಮಲ್ನಾಡು ಪ್ರೌಢಶಾಲೆಯ ಕ್ರೀಡಾಂಗಣದ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ. ನಂತರ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ತೆರಳುವರು. ಮಲ್ಯ ಅವರೊಂದಿಗೆ ಪಿಂಕಿ ಲಾಲ್ವಾಣಿ, ನಫೀಸಾ ಮತ್ತು ಮೇಜರ್ ರಾಜೇಶ್ ಮಿತ್ರ ಬರಲಿದ್ದಾರೆ ಎಂದು ತಿಳಿದುಬಂದಿದೆ.ಮಲ್ಯರಿಂದ ಸ್ವರ್ಣ ದ್ವಾರ ಸಮರ್ಪಣೆ ಕಾರ್ಯಕ್ರಮ ಸಂಜೆ 4 ಗಂಟೆ ವೇಳೆಗೆ  ನಡೆಯಲಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry