ಶುಕ್ರವಾರ, ನವೆಂಬರ್ 15, 2019
20 °C
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ

ಕುಖ್ಯಾತ ಬುಕ್ಕಿಗಳ ಬಂಧನ

Published:
Updated:

ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಕುಖ್ಯಾತ ಬುಕ್ಕಿಗಳನ್ನು ಬಂಧಿಸಿರುವ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಐದು ಲಕ್ಷ ನಗದು ಜಪ್ತಿ ಮಾಡಿದ್ದಾರೆ.ಪ್ಯಾಲೇಸ್ ಗುಟ್ಟಹಳ್ಳಿಯ ಕಮಲ್ (39), ಬಸವೇಶ್ವರನಗರದ ವೃಷಬ್ (35), ಯಲಹಂಕ ಬಳಿಯ ಚಿಕ್ಕಬೊಮ್ಮಸಂದ್ರದ ಸತೀಶ್ (42) ಮತ್ತು ರವಿಕುಮಾರ್ (37) ಬಂಧಿತರು. ಆರೋಪಿಗಳಿಂದ ಹಣ, ಲ್ಯಾಪ್‌ಟಾಪ್, ಟಿ.ವಿ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳು ಐಪಿಎಲ್ ಪಂದ್ಯಗಳ ಮೇಲೆ ನಗರದ ವೈಯಾಲಿಕಾವಲ್, ಯಲಹಂಕ ಉಪನಗರ ಹಾಗೂ ಬಸವೇಶ್ವರನಗರದ ಹಲವೆಡೆ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು. ಪ್ರಕರಣದ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)