ಬುಧವಾರ, ಮೇ 12, 2021
20 °C

ಕುಖ್ಯಾತ ರೌಡಿ ಚೋಟ್ಯಾ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಐದು ವರ್ಷಗಳಲ್ಲಿ ಗುಲ್ಬರ್ಗದಲ್ಲಿ ನಡೆದಿದ್ದ 16 ಪ್ರಕರಣಗಳ ಪ್ರಮುಖ ಆರೋಪಿ ಚೋಟ್ಯಾ ಯಾನೆ ಆನಂದ ಆಲಿಯಾಸ್ ಪ್ರಿಯದರ್ಶನ್ ಗಾಯಕವಾಡ್ (24) ಎಂಬಾತನನ್ನು ಶುಕ್ರವಾರ ಬೆಳಿಗ್ಗೆ  ಪೊಲೀಸರು ಬಂಧಿಸಿದ್ದಾರೆ. ಮೂವರು ಸಹಚರರನ್ನು ಗುರುವಾರ ರಾತ್ರಿಯೇ ಬಂಧಿಸಲಾಗಿತ್ತು.ಹಲವು ಪ್ರಕರಣಗಳ ಆರೋಪಿ ಚೋಟ್ಯಾ ಹಾಗೂ ಸಹಚರರು ಗುರುವಾರ ರಾತ್ರಿಯೂ ನಗರದ ಕೊಠಾರಿ ಭವನ ಬಳಿಯ ಸೈಬರ್ ಕೆಫೆ ಹಾಗೂ ಜೇವರ್ಗಿ ಕ್ರಾಸ್ ಬಳಿಯ ಪೆಟ್ರೋಲ್ ಪಂಪ್‌ನಲ್ಲಿ  ದರೋಡೆ ನಡೆಸಿ ಪರಾರಿಯಾಗಿದ್ದರು.ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಪಿ.ಚಂದ್ರಶೇಖರ್ ನೇತೃತ್ವದ ಪೊಲೀಸ್ ತಂಡವು ನಗರ ಹೊರವಲಯದ ಶರಣಶಿರಸಗಿಯಲ್ಲಿ ಈತನನ್ನು ಹಾಗೂ ಸಹಚರರಾದ ರವಿ (27) ಯಲ್ಲಾಲಿಂಗ (19) ಮತ್ತು ಸುನೀಲ (19) ಎಂಬವರನ್ನು ಬಂಧಿಸಿದರು. ಆದರೆ ಪೊಲೀಸರ ಮೇಲೆ ತಲವಾರು ಬೀಸಿದ್ದ ಚೋಟ್ಯಾ ಪರಾರಿಯಾದ.ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಪವಾರ್ ನೇತೃತ್ವದಲ್ಲಿ ವಿವಿಧ ತಂಡಗಳನ್ನು ರಚಿಸಿದ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದರು. ಸಾವಳಗಿಯಲ್ಲಿ ಶುಕ್ರವಾರ ಬೆಳಿಗ್ಗೆ 11ಕ್ಕೆ ಚೋಟ್ಯಾನತ್ತ ಐದು ಸುತ್ತಿನ ಗುಂಡು ಹಾರಿಸಿದ ಬಳಿಕ  ಗಾಯಗೊಂಡ ಆತನನ್ನು  ಬಂಧಿಸಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.