ಕುಚೋದ್ಯದ ಹೇಳಿಕೆ- ಕ್ಷಮೆಯಾಚನೆಗೆ ಆಗ್ರಹ

7

ಕುಚೋದ್ಯದ ಹೇಳಿಕೆ- ಕ್ಷಮೆಯಾಚನೆಗೆ ಆಗ್ರಹ

Published:
Updated:

ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರ ಯೋಜನೆಯಿಂದ ಬಾಧಿತ ರಾಗಿ ಕಳೆದ 63 ದಿನಗಳಿಂದ ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಶಾಂತಿ ಯುತವಾಗಿ ಧರಣಿ ಸತ್ಯಾಗ್ರಹ ನಡೆಸು ತ್ತಿದ್ದೇವೆ. ಈ ಹೋರಾಟಕ್ಕೆ 1996ರ ತಳಹದಿ ಇದೆ.  ಹಲವಾರು ಸಂಘಟನೆ ಗಳು, ರಾಜಕೀಯ ಪಕ್ಷಗಳು ಹೋರಾ ಟಕ್ಕೆ ಬೆಂಬಲ ನೀಡಿವೆ ಎಂದು ಬಾಳೆ ಮನಿ, ಹರ್ಟುಗಾ, ಹರೂರು, ಬಳಸೆ, ಕುಚೇಗಾರ, ಸುಳಗೇರಿ ಹಳ್ಳಿಯ ಗ್ರಾಮ=ಸ್ಥರ ಹೋರಾಟ ಸಮಿತಿ ಹೇಳಿದೆ.ಈ ಕುರಿತು ಸಮಿತಿ ಪತ್ರಿಕಾ ಹೇಳಿಕೆ ನೀಡಿದ್ದು, ಹೋರಾಟದ ದಿಕ್ಕು ತಪ್ಪಿಸ ಲಾಗುತ್ತಿದೆ ಎಂದು ಬಿಜೆಪಿ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದು, ಹೋರಾ ಟದ ದಿಕ್ಕು ತಪ್ಪಿಸುವ ಪತ್ರಿಕಾ ಹೇಳಿಕೆ ಗಳನ್ನು ನಾವು ಒಪ್ಪಲು ಸಾಧ್ಯವಿಲ್ಲ. ಕರ್ನಾಟಕ ಪ್ರಾಂತ ರೈತ ಸಂಘ 1996ರಿಂದಲೂ ಕೈಗಾ-ಕಾಳಿ ನಿರಾಶ್ರಿತರ ಹೋರಾಟ ನಡೆಸಿ ಕೊಂಡು, ಹಲವು ಹಂತದಲ್ಲಿ ಗೆಲುವು ಪಡೆದ ಇತಿಹಾಸವನ್ನು ನಾವು ಗಮನಿ ಸಿದ್ದೇವೆ. ಕರ್ನಾಟಕ ಪ್ರಾಂತ ರೈತ ಸಂಘವು ಯಾವುದೇ ನೋಂದಾಯಿತ ರಾಜಕೀಯ ಪಕ್ಷವಲ್ಲ ಎಂದು ತಿಳಿಸಿದೆ.63 ದಿನಗಳಲ್ಲಿ ಹಲವು ರಾಜ ಕೀಯ ಪಕ್ಷಗಳ ಮುಖಂಡರು, ಶಾಸಕರು, ಮಂತ್ರಿಗಳು, ಮಾಜಿ ಸಚಿ ವರು, ಸಂಘ ಟನೆಗಳ ಮುಖಂಡರು ಧರಣಿ ಸ್ಥಳಕ್ಕೆ ಆಗಮಿಸಿ ಹೋರಾಟ ಬೆಂಬಲಿಸಿದ್ದರಿಂದ ಹೋರಾಟ ಇಲ್ಲಿ ಯವರೆಗೂ ಯಶಸ್ವಿ ಯಾಗಿ ಮುನ್ನಡೆ ಯುತ್ತಾ ಬಂದಿದೆ ಎಂದು ಸಮಿತಿ ಹೇಳಿದೆ.ನಮ್ಮ ಮನವಿಗೆ ಸ್ಪಂದಿಸಿ ಸಿಪಿಐ (ಎಂ) ಪಕ್ಷದ ರಾಷ್ಟ್ರೀಯ ಮುಖಂಡ ರಾದ ಸೀತಾರಾಮ ಯೆಚೂರಿ ಯವರು ದೆಹಲಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ರನ್ನು ನಮ್ಮ ನಿಯೋಗದ ಜೊತೆ ಭೇಟಿ ಮಾಡಿಸಿ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಜ. 27 ರಂದು ಸಚಿವ ಆನಂದ ಅಸ್ನೋಟಿಕರ್ ಅವರು ಕೈಗಾ ಬಾಧಿತ ಜನತೆಯ ಸಮಸ್ಯೆಯ ತೀವ್ರತೆ ಅರಿತು ಹೋರಾಟ ಸಮಿತಿಯ ನಿಯೋಗವ ನ್ನೊಳಗೊಂಡು ಎನ್‌ಡಿಎಂಎ ಉಪಾ ಧ್ಯಕ್ಷರನ್ನು ಭೇಟಿ ಮಾಡಿದ್ದರು ಎಂದು ಸಮಿತಿ ಹೇಳಿದೆ.ಎರಡೂ ನಿಯೋಗಗಳು ಭೇಟಿ ಯಾದಾಗಲೂ ರಾಜ್ಯ ಸರ್ಕಾರದ ಪರವಾಗಿ ಒಂದು ಪ್ರಸ್ತಾವವನ್ನು ಕಳಿಸಿಕೊಡಿ. ಗಂಭೀರತೆಯನ್ನು ಅರಿತು ಪರಿಶೀಲಿಸುತ್ತೇವೆ ಎಂದು ಎನ್‌ಡಿಎಂಎ ಉಪಾಧ್ಯಕ್ಷರು ತಿಳಿಸಿದ್ದಾರೆ. ಸಚಿವ ಅಸ್ನೋಟಿಕರ್ ಅವರು ಪ್ರಸ್ತಾವ ಕಳಿಹಿ ಸುವುದಾಗಿ ಅಂದು ಭರವಸೆ ನೀಡಿದ್ದಾರೆ. ಉಸ್ತುವಾರಿ ಸಚಿವ ಕಾಗೇರಿ ಅವರೂ ಧರಣಿ ಸ್ಥಳಕ್ಕೆ ಆಗಮಿಸಿ, ನ್ಯಾಯಯುತ ಪರಿಹಾರ ಕೊಡಿಸುವುದಾಗಿ ಹೇಳಿದ್ದಾರೆ ಎಂದು ಸಮಿತಿ ಹೇಳಿದೆ.

ಜ. 26 ರಂದು ಸಿಪಿಐ(ಎಂ) ಸಂಸದೀಯ ಸಮಿತಿ ನಾಯಕ ಬಸು ದೇವ ಆಚಾರ್ಯ ಅವರು ನಮ್ಮ ಹೋರಾಟವನ್ನು ಗಮನಿಸಿ ಧರಣಿ ಸ್ಥಳಕ್ಕೆ ಆಗಮಿಸಿ, ಬೆಂಬಲಿಸಿದ್ದಲ್ಲದೇ ಕೈಗಾಕ್ಕೆ ಭೇಟಿ ನೀಡಿ ಅಲ್ಲಿಯೇ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದರು. ವಿರೋಧ ಪಕ್ಷಗಳ ಮುಖಂಡರಾಗಿ  ಪ್ರಧಾನ ಮಂತ್ರಿಗಳ ಗಮನಕ್ಕೆ ಈ ವಿಷಯವನ್ನು ತರುವು ದಾಗಿ ತಿಳಿಸಿರುವುದು ಸಂತೋಷದ ವಿಷಯ ಎಂದು ಸಮಿತಿ ತಿಳಿಸಿದೆ.ಜನರ ಸಂಕಷ್ಟದ ಬದುಕಿನ ಅರಿ ವಿಲ್ಲದ ಈ ಬಿಜೆಪಿ ನಗರ ಸಮಿತಿಯ ವರು ಕುಚೋದ್ಯದ ಹೇಳಿಕೆ ನೀಡಿ ರುವುದು ಸ್ವಾಭಿಮಾನದ ಹೋರಾ ಟಕ್ಕೆ ಅವಮಾನ ಮಾಡಿದಂತೆ. ಕೂಡಲೇ ಹೋರಾಟಗಾರರ ಕ್ಷಮೆ ಯಾಚಿಸಬೇಕೆಂದು ಹೋರಾಟ ಸಮಿತಿ ಆಗ್ರಹಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry