ಬುಧವಾರ, ಜನವರಿ 22, 2020
22 °C

ಕುಚ್ಚೂರು: ಸಂಭ್ರಮದ ಕಂಬಳ ಮುಕ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಬ್ರಿ: ಇಲ್ಲಿನ ಕುಚ್ಚೂರು ಕೊಡ ಮಣಿತ್ತಾಯ ಧೂಮಾವತಿ ಗರಡಿಯ ಎರಡನೇ ವರ್ಷದ ಕುಚ್ಚೂರು ಕಂಬಳ ಬುಧವಾರ ಸಂಭ್ರಮದ ತೆರೆ ಕಂಡಿತು. ಜಿಲ್ಲೆಯ ವಿವಿಧೆಡೆ 46 ಜೊತೆ ಕೋಣಗಳು ಕಂಬಳದಲ್ಲಿ ಭಾಗವ ಹಿಸಿದ್ದು, ವಿವಿಧ ವಿಭಾಗದಲ್ಲಿ ಕಂಬಳ ನಡೆಯಿತು. ಕೆಸರು ಗದ್ದೆ ಓಟ, ಹಗ್ಗಜಗ್ಗಾಟ ಸೇರಿ ಕ್ರೀಡೋತ್ಸವ ನಡೆಯಿತು. ಸಾವಿರಾರು ಜನತೆ ಕುಚ್ಚೂರು ಕಂಬಳಕ್ಕೆ ಸಾಕ್ಷಿಯಾದರು.ಕುಚ್ಚೂರು ಕಂಬಳ ಮಹೋತ್ಸವ ಸಮಿತಿ, ಗ್ರಾಮಸ್ಥರು, ಕುಚ್ಚೂರು ಕೊಡಮಣಿತ್ತಾಯ ಧೂಮಾವತಿ ಗರಡಿ ಆಡಳಿತ ಸಮಿತಿ, ಕುಚ್ಚೂರು ದೊಡ್ಮನೆ, ಕಂಬಳ ಮನೆತನದವರ ಸಹಕಾರದಲ್ಲಿ ಕಂಬಳ ನಡೆಯಿತು.ನೀರೆಬೈಲೂರು ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ ಆಡಳಿತ ಧರ್ಮದರ್ಶಿ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಟ್ಟದ ಕ್ರೀಡಾ ಪಟು ಅಶ್ವಿನಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಕುಚ್ಚೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ, ಕುಚ್ಚೂರು ಕೊಡಮಣಿತ್ತಾಯ ಧೂಮಾವತಿ ಗರಡಿ ಆಡಳಿತ ಸಮಿತಿ ಗೌರವಾಧ್ಯಕ್ಷ ಕುಚ್ಚೂರು ಬಾಲಕೃಷ್ಣ ರಾವ್, ಅಧ್ಯಕ್ಷ ಕಿರಣ್ ತೋಳಾರ್, ಕುಚ್ಚೂರು ದೊಡ್ಮನೆ ಎಚ್.ಆರ್. ಶೆಟ್ಟಿ, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಭೂತು ಗುಂಡಿ ಕರುಣಾಕರ ಶೆಟ್ಟಿ, ಧಾರ್ಮಿಕ ಮುಖಂಡ ಹೆಬ್ರಿ ಪ್ರಸನ್ನ ಬಲ್ಲಾಳ್, ರಾಜ್ಸೋತ್ಸವ ಪ್ರಶಸ್ತಿ ಪುರಸ್ಕ್ರತ ಬಾರ್ಕೂರು ಶಾಂತಾರಾಮ ಶೆಟ್ಟಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಅಕಾಡೆಮಿ ಕಾರ್ಯದರ್ಶಿ ಗುಣಪಾಲ ಕಡಂಬ, ಹೆಬ್ರಿ ಪಂಚಾ ಯಿತಿ ಅಧ್ಯಕ್ಷೆ ಸುಮಾ ನವೀನ ಅಡ್ಯಂ ತಾಯ, ಕುಚ್ಚೂರು ಕಂಬಳ ಮಹೋ ತ್ಸವ ಸಮಿತಿಯ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಸಮಿತಿಯ ಮುಖಂಡರು ರಮೇಶ ಪೂಜಾರಿ, ಅಣ್ಣಯ್ಯ ಅಂಬಿಗ, ವಿಜಯ ಪೂಜಾರಿ, ತಮ್ಮಯ್ಯ ನಾಯ್ಕ್, ರೋಶನ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.ಇತ್ತೀಚೆಗೆ ನಿಧನರಾದ ಬೇಳಂಜೆ ಸತ್ಯರಂಜನದಾಸ್ ಹೆಗ್ಡೆ, ಹೆಬ್ರಿ ರಾಧಾಕೃಷ್ಣ ನಾಯಕ್, ಕುಚ್ಚೂರು ಪದ್ಮಾವತಿಯಮ್ಮ ಅವರಿಗೆ ಸಂತಾಪ ಸೂಚಿಸಲಾಯಿತು. ಹೆಬ್ರಿ ಪ್ರಸಾದ ಕು ಮಾರ್ ಶೆಟ್ಟಿ ಮತ್ತು ಶಿಕ್ಷಕ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)