ಕುಟುಂಬ ಆರೋಗ್ಯ ಅರಿವಿಗಾಗಿ ಜಾಥಾ

7

ಕುಟುಂಬ ಆರೋಗ್ಯ ಅರಿವಿಗಾಗಿ ಜಾಥಾ

Published:
Updated:

ಸಿಂದಗಿ: ಕ್ಷೇತ್ರ ಪ್ರಚಾರ ನಿರ್ದೇಶನಾಲಯವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಇವರ ಸಹಯೋಗದಲ್ಲಿ ಬುಧವಾರ ಪಟ್ಟಣದಲ್ಲಿ ಕುಟುಂಬ ಆರೋಗ್ಯ ಅರಿವು ಬೃಹತ್ ಜಾಥಾ ನಡೆಯಿತು.ಜಾಥಾ ಸ್ಥಳೀಯ ಕಲ್ಯಾಣನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಿಂದ ಹೊರಟು ಅಂಬಿಗರ ಚೌಡಯ್ಯ ವೃತ್ತದ ಮುಖಾಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಪುನಃ ಶಾಲೆಗೆ ಮರಳಿತು.

ಜಾಥಾದಲ್ಲಿ ಪಾಲ್ಗೊಂಡ ಕಿಶೋರಿಯರು, ಅಂಗನವಾಡಿ ಕಾರ್ಯ ಕರ್ತೆಯರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರು `ಇಂದಿನ ಕಿಶೋರಿ ನಾಳಿನ ತಾಯಿ~ `ಸಂಪೂರ್ಣ ಲಸಿಕೆ ಹಾಕಿಸಿ~, `ಜನನಿ ಸುರಕ್ಷಾ ಯೋಜನೆ ಯಶಸ್ವಿಗೊಳ್ಳಲಿ~, `ಮಗುವಿನ ಹೆರಿಗೆ ಆಸ್ಪತ್ರೆಯಲ್ಲಿಯೇ ನಡೆಯಲಿ~ ಮುಂತಾದ ಘೋಷಣೆಗಳನ್ನು ಕೂಗುತ್ತಿದ್ದರು.ಕ್ಷೇತ್ರ ಪ್ರಚಾರ ಅಧಿಕಾರಿ ಶಿವಯೋಗಿ ಮೇಸ್ತ್ರಿ, ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ಜಿ.ಎಸ್. ಗುಣಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್. ಯರಗಲ್, ಅಂಗನವಾಡಿ ಮೇಲ್ವಿಚಾ ರಕಿ ಸಿಂಧು ಬಡಿಗೇರ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸರಸ್ವತಿ ಮಠ, ತಾಲ್ಲೂಕು ಆರೋಗ್ಯ ಇಲಾಖೆಯ ಜಾಯವಾಡಗಿ ಜಾಥಾದ ನೇತೃತ್ವ ವಹಿಸಿದ್ದರು.ಉಪನ್ಯಾಸ:  ನಂತರ ನಡೆದ ಕುಟುಂಬ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಸಿಂದಗಿ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞೆ ಸರೋಜಿನಿ ದಾನಗೊಂಡ ಮಕ್ಕಳ ಆರೋಗ್ಯ ರಕ್ಷಣೆ ಕುರಿತಾಗಿ ಉಪನ್ಯಾಸ ನೀಡಿ ಸದ್ಯದ ಪರಿಸ್ಥಿತಿಯಲ್ಲಿ ಸಾವಿರಕ್ಕೆ 400 ಮಕ್ಕಳು ಒಂದು ವರ್ಷದೊಳ ಗಾಗಿಯೇ ಸಾವನ್ನಪ್ಪುತ್ತಿರುವ ಬಗ್ಗೆ ಸಮೀಕ್ಷಾ ವರದಿ ಪ್ರಕಟಿಸಿದೆ.ಇದಕ್ಕೆ ಪ್ರಮುಖ ಕಾರಣ ಪೋಲಿಯೋ ಲಸಿಕೆಯಂಥ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದಿರುವುದು ಎಂದು ತಿಳಿಸಿದರು. ಜನನಿ ಸುರಕ್ಷಾ ಯೋಜನೆ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇಂಥ ಸರ್ಕಾರಿ ಸೇವೆಗಳನ್ನು ಸದುಪಯೋಗಪಡಿಸಿ ಕೊಳ್ಳುವಂತೆ ಅವರು ಸಲಹೆ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್. ಯರಗಲ್, ಕ್ಷೇತ್ರ ಪ್ರಚಾರಾಧಿಕಾರಿ ಶಿವಯೋಗಿ ಮೇಸ್ತ್ರಿ ಮಾತನಾಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಎಸ್.ಗುಣಾರಿ ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry