ಗುರುವಾರ , ಮೇ 19, 2022
20 °C

ಕುಟುಂಬ ಪ್ರಿಯ ಜಾಬ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್, (ಪಿಟಐ): ಆ್ಯಪಲ್ ಕಂಪೆನಿಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ತಮ್ಮ ಕೊನೆಗಾಲದಲ್ಲಿ ಮೆಟ್ಟಿಲು ಹತ್ತಲು ಸಾಧ್ಯವಾಗದಷ್ಟು ನಿತ್ರಾಣಗೊಂಡಿದ್ದರೂ, ಕೊನೆ ಉಸಿರಿರುವವರೆಗೂ ಮಾನಸಿಕ ನಿಯಂತ್ರಣ ಕಳೆದುಕೊಂಡಿರಲಿಲ್ಲ.ಸಾವು ಸಮೀಪಿಸುತ್ತಿದ್ದ ಸಂದರ್ಭದಲ್ಲಿ ಅವರು ತಮ್ಮ ಕುಟುಂಬದ ಸದಸ್ಯರು, ಆಪ್ತರ ಜತೆ ಕಳೆಯಲು ಮೊದಲೇ ನಿರ್ಧರಿಸಿದ್ದರು. ಸಾಯುವ ಮೊದಲು ಆ್ಯಪಲ್ ಕಂಪೆನಿಯ ಅಧಿಕಾರಿಗಳಿಗೆ ಹೊಸ ಐಫೋನ್ ಬಿಡುಗಡೆ ಮಾಡುವ ಬಗ್ಗೆ ಸಲಹೆ ನೀಡಿದ್ದರು ಎಂದು `ನ್ಯೂಯಾರ್ಕ್ ಟೈಮ್ಸ~ ವರದಿ ಮಾಡಿದೆ.`ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ ತಾವು ಇನ್ನು ಹೆಚ್ಚು ದಿನ ಬದುಕುವುದಿಲ್ಲ ಎಂಬ ಸತ್ಯ ಕಳೆದ ಫೆಬ್ರುವರಿಯಲ್ಲೇ ಗೊತ್ತಾಗಿತ್ತು. ಈ ಸಂದರ್ಭದಲ್ಲಿ ಅವರಿಗೆ ತಮ್ಮನ್ನು ನಂಬಿದವರು, ಹೆಂಡತಿ, ನಾಲ್ಕು ಮಕ್ಕಳು, ಕಂಪೆನಿಯಲ್ಲಿ ತಮ್ಮಂದಿಗೆ ದುಡಿದವರ ಬಗ್ಗೆ ಕಾಳಜಿ ಹೆಚ್ಚಾಗಿತ್ತು~ ಎಂಬ ಅವರ ಸಹೋದರಿ ಮೋನಾ ಸಿಂಪ್‌ಸನ್ ಅವರ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.ಕಡೆಗಾಲದಲ್ಲಿ ಜಾಬ್ಸ್ ಅನೇಕ ಸನ್ಮಾನ, ಪ್ರಶಸ್ತಿಗಳನ್ನು ತಿರಸ್ಕರಿಸಿದರು. ಕೊನೆಕೊನೆಗೆ ಪತ್ನಿ ಮತ್ತು ಮಕ್ಕಳ ಜತೆಯೇ ಹೆಚ್ಚಾಗಿ ಕಾಲ ಕಳೆದರು ಎಂದು ಅವರು ಸ್ಮರಿಸಿದ್ದಾರೆ.24ಕ್ಕೆ ಪ್ರಕಟ: ಜಾಬ್ಸ್ ಅವರ ಆತ್ಮಕಥೆ ಇದೇ 24ರಂದು ಪ್ರಕಟವಾಗಲಿದೆ ಎಂದು ವರದಿಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.