ಭಾನುವಾರ, ಜೂನ್ 13, 2021
23 °C

ಕುಟುಂಬ ಪ್ರೀತಿ ವಂಚಿತ ವೃದ್ಧರು: ನಾಗಪ್ರಕಾಶ್ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ಇಂದು ವೃದ್ಧರು ಕುಟುಂಬದ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ. ವೃದ್ಧಾಶ್ರಮಗಳಲ್ಲಿ ಜೀವಕಳೆ ಇಲ್ಲದೇ ಬದುಕು ದೂಡುತ್ತಿದ್ದಾರೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಡಾ.ಬಿ.ಎಸ್. ನಾಗಪ್ರಕಾಶ್ ಕಳವಳ ವ್ಯಕ್ತಪಡಿಸಿದರು.ಬಾತಿ ವೃದ್ಧಾಶ್ರಮದಲ್ಲಿ ಗುರುವಾರ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯರಿಗೆ ಸೀರೆ ವಿತರಿಸಿ ಅವರು ಮಾತನಾಡಿದರು.ಪ್ರತಿಯೊಂದು ಕುಟುಂಬದಲ್ಲೂ ಇಂದು ಮಕ್ಕಳು ಶಿಕ್ಷಣ ಪಡೆದು ಉತ್ತಮ ಸ್ಥಾನಮಾನ ಗಳಿಸುತ್ತಿದ್ದಾರೆ. ಅಮೆರಿಕ ಸೇರಿದಂತೆ ದೇಶ-ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಆದರೆ, ಅವರನ್ನು ಸಾಕಿ ಬೆಳೆಸಿದ ತಾಯಿ-ತಂದೆಯರು ಪ್ರೀತಿಯಿಂದ ವಂಚಿತರಾಗಿ ವೃದ್ಧಾಶ್ರಮದಲ್ಲಿ ದಿನ ದೂಡುತ್ತಿದ್ದಾರೆ. ಅಂತಹ ವೃದ್ಧರಿಗೆ ಬೇಕಿರುವುದು ಹಣವಲ್ಲ. ಮಕ್ಕಳ, ಕುಟುಂಬದ ಪ್ರೀತಿ ಮಾತ್ರ ಎಂದು ಪ್ರತಿಪಾದಿಸಿದರು.ಸಮಾಜ ಸೇವಕಿ ಲಕ್ಷ್ಮೀ ತಿಮ್ಮಪ್ಪ ಮಾತನಾಡಿ, ಮಹಿಳಾ ದಿನಾಚರಣೆ 1910ರಲ್ಲಿ ಆರಂಭಿಸಲಾಯಿತು. ಶ್ರಮಿಕ ಮಹಿಳೆಯರಿಗಾಗಿ ಆರಂಭವಾದ ಈ ದಿನ ಇಂದು ಎಲ್ಲ ವರ್ಗದ ಮಹಿಳೆಯರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿ, ಮಹಿಳೆಯರ ಕುಟುಂಬ ನಿರ್ವಹಣೆಯ ಹೊಣೆ ಶ್ಲಾಘನೀಯ. ಉದ್ಯೋಗಸ್ಥ ಮಹಿಳೆಯರೂ ಇಂದು ಕುಟುಂದ ನಿರ್ವಹಣೆ ಯಶ್ವಸಿಯಾಗಿ ಮಾಡುತ್ತಿದ್ದಾರೆ. ಅವರ ಮನೋಸ್ಥೈರ್ಯ ಉನ್ನತವಾದುದು ಎಂದು ಶ್ಲಾಘಿಸಿದರು.ಲಯನೆಸ್ ಅಧ್ಯಕ್ಷೆ ವಿನುತಾ ರವಿ, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಸಿ.ಎಂ. ಹಿರೇಮಠ್, ಬೆಳ್ಳೂಡಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ 20 ಮಹಿಳೆಯರಿಗೆ ಉತ್ತಮ ಗುಣಮಟ್ಟದ ಕಾಟನ್ ಸೀರೆ ವಿತರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.