ಕುಟುಂಬ ಸಮೇತ ಪತ್ರಕರ್ತನ ಹತ್ಯೆ

ಬುಧವಾರ, ಜೂಲೈ 17, 2019
27 °C

ಕುಟುಂಬ ಸಮೇತ ಪತ್ರಕರ್ತನ ಹತ್ಯೆ

Published:
Updated:

ವೆರಾಕ್ರೂಸ್ (ಮೆಕ್ಸಿಕೊ) (ಐಎಎನ್‌ಎಸ್/ಇಎಫ್‌ಇ): ಭದ್ರತಾ ವಿಷಯಗಳ ವರದಿ ಮಾಡುತ್ತಿದ್ದ ಇಲ್ಲಿನ ಪತ್ರಕರ್ತರೊಬ್ಬರನ್ನು ಮನೆಗೆ ನುಗ್ಗಿ ಪತ್ನಿ, ಮಗುವಿನ ಸಮೇತ ಕೊಲೆ ಮಾಡಲಾಗಿದೆ.55 ವರ್ಷದ ಮಿಗುಲ್ ಏಂಜೆಲ್ ಲೊಪೆಜ್ ವೆಲಾಸ್ಕೊ `ನಾಟಿವರ್~ ಎಂಬ ಅಧಿಕ ಪ್ರಸಾರದ ದಿನಪತ್ರಿಕೆಯಲ್ಲಿ ಮಾದಕ ವಸ್ತು ಕಳ್ಳಸಾಗಣೆಯ ವರದಿ ಮಾಡುತ್ತಿದ್ದರು.ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಪ್ರಕಾರ 2000ದಿಂದ ಈವರೆಗೆ ಮೆಕ್ಸಿಕೊದಲ್ಲಿ 68 ಪತ್ರಕರ್ತರು ಹತ್ಯೆಗೊಳಗಾಗಿದ್ದಾರೆ. ಜಗತ್ತಿನಲ್ಲೇ ವೆುಕ್ಸಿಕೊ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ಸ್ಥಳ ಎಂದು ಸರ್ಕಾರೇತರ ಸಂಸ್ಥೆಗಳು ಹೇಳಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry