ಕುಡಿತದ ವಯೋಮಿತಿ ಏರಿಕೆಗೆ ನಿರ್ಧಾರ

ಸೋಮವಾರ, ಜೂಲೈ 22, 2019
27 °C

ಕುಡಿತದ ವಯೋಮಿತಿ ಏರಿಕೆಗೆ ನಿರ್ಧಾರ

Published:
Updated:

ಮುಂಬೈ (ಐಎಎನ್‌ಎಸ್): ಯುವಜನತೆ ಮದ್ಯಪಾನ ಸೇವನೆಯ ಚಟಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಒಳಗಾಗುವುದನ್ನು ತಡೆಯುವ ಪ್ರಯತ್ನವಾಗಿ ಮಹಾರಾಷ್ಟ್ರ ಸರ್ಕಾರವು ಬಿಯರ್ ಸೇವನೆಯ ಕನಿಷ್ಠ ವಯೋಮಿತಿಯನ್ನು 18ರಿಂದ 21ಕ್ಕೆ ಮತ್ತು ಇತರ ಮದ್ಯಪಾನಗಳ ಸೇವನೆ ವಯೋಮಿತಿಯನ್ನು 21ರಿಂದ 25ಕ್ಕೆ ಏರಿಸಿ ಬುಧವಾರ ನಿರ್ಧಾರ ಪ್ರಕಟಿಸಿದೆ.ಮಧ್ಯಾಹ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡ ಬಳಿಕ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಸುದ್ದಿಗಾರರ ಜೊತೆ ಮಾತನಾಡಿ ಈ ಕುರಿತ ವಿವರ ನೀಡಿದರು.`ಇಂದಿನ ಸಮಾಜದಲ್ಲಿ ನೈತಿಕ ಪೊಲೀಸ್ ವ್ಯವಸ್ಥೆಯನ್ನು ಕಾಪಾಡುವ ದೃಷ್ಟಿ~ಯಿಂದ ಸರ್ಕಾರ ಇಂತಹ ಮಹತ್ವದ ತೀರ್ಮಾನವನ್ನು ಕೈಗೊಂಡಿರುವುದಾಗಿ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry