ಕುಡಿಯಲು ನೀರುಕೊಡಿ

ಮಂಗಳವಾರ, ಜೂಲೈ 16, 2019
28 °C

ಕುಡಿಯಲು ನೀರುಕೊಡಿ

Published:
Updated:

ರಾಮಮೂರ್ತಿ ನಗರದ ನಿವಾಸಿಗಳು ಇತ್ತೀಚೆಗೆ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಕಳೆದ 15-20 ವರ್ಷಗಳಿಂದ ಇಲ್ಲಿ ಸಂಘ ಸಂಸ್ಥೆಗಳು ಸಾರ್ವಜನಿಕರು ಎಲ್ಲ ಶಾಸಕರ ಸಭೆಗಳಲ್ಲಿ ನೀರಿನ ಬಗ್ಗೆಯೇ ಒತ್ತಿ ಹೇಳಲಾಗಿದೆ.ಆದರೆ ಇದುವರೆಗೆ ಸಂಬಂಧಪಟ್ಟ ಅಧಿಕಾರಿಗಳಿಂದ, ಚುನಾಯಿತ ಪ್ರತಿನಿಧಿಗಳಿಂದ ಕೇವಲ ಆಶ್ವಾಸನೆಯೇ ಆಗಿದೆ. ಆಶ್ವಾಸನೆಗಳನ್ನು ಕೇಳಿ ಕೇಳಿ ಜನತೆಗೆ ಸಾಕಾಗಿ ಹೋಗಿದೆ.ಈಗ ಪ್ರಗತಿಯಲ್ಲಿರುವ ಕಾವೇರಿ 4ನೇ ಹಂತದ ಕಾಮಗಾರಿಯನ್ನು ಸಾಧ್ಯವಾದಷ್ಟು ಬೇಗ ಮುಗಿಸಿ ಕಡೇ ಪಕ್ಷ ಈ ವರ್ಷ ಮುಗಿಯುವುದರೊಳಗೆ ರಾಮಮೂರ್ತಿನಗರದ ಜನತೆಗೆ ಕಾವೇರಿ ನೀರನ್ನು ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಎಲ್ಲರಲ್ಲೂ ಈ ಮನವಿ. ನಮ್ಮ ರಾಜಕಾರಣಿಗಳು ಇಷ್ಟು ವರ್ಷಗಳ ನಂತರವಾದರೂ ಈ ಒಂದು ಒಳ್ಳೆಯ ಕೆಲಸ ಮಾಡುವರೆಂದು ನಂಬಿರುವ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry