ಕುಡಿಯಲು ಶುದ್ಧ ನೀರು ಕೊಡಿ: ಆಗ್ರಹ

7

ಕುಡಿಯಲು ಶುದ್ಧ ನೀರು ಕೊಡಿ: ಆಗ್ರಹ

Published:
Updated:

ಮಧುಗಿರಿ: ಪಾವಗಡ ತಾಲ್ಲೂಕಿಗೆ ಹೇಮಾವತಿ, ತುಂಗಭದ್ರ ಜಲಾಶಯ ಅಥವಾ ಯಾವುದೇ ಯೋಜನೆ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್ ಆಗ್ರಹಿಸಿದರು.ಪಾವಗಡ ತಾಲ್ಲೂಕು ಸಮಗ್ರ ನೀರು ಹೋರಾಟ ವೇದಿಕೆ ಹಾಗೂ ತಾಲ್ಲೂಕಿನ ವಿವಿಧ ಸಂಘಟನೆಗಳ ವತಿಯಿಂದ ಪಾವಗಡದಿಂದ ಬೆಂಗಳೂರುವರೆಗೆ ಪಾದಯಾತ್ರೆ ಕೈಗೊಂಡು ಗುರುವಾರ ಮಧುಗಿರಿ ಆಗಮಿಸಿದ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕಿನಲ್ಲಿ ಅಧಿಕ ಪ್ಲೋರೈಡ್‌ಯುಕ್ತ ನೀರು ಸೇವನೆಯಿಂದ ಕಿಡ್ನಿ ವೈಫಲ್ಯ, ಮೂಳೆ ಸವೆತ, ರಕ್ತದೊತ್ತಡ, ಹೃದಯಾಘಾತ, ಮಕ್ಕಳಲ್ಲಿ ಅಪೌಷ್ಟಕತೆ ಹೆಚ್ಚಾಗಿ ಸಾವು- ನೋವುಗಳು ಸಂಭವಿಸುತ್ತಿವೆ ಎಂದರು.ಕಳೆದ 30 ವರ್ಷದಿಂದ ಅನೇಕ ಮುಖಂಡರು, ಸಂಘ ಸಂಸ್ಥೆಗಳು ನೀರಿಗಾಗಿ ಒತ್ತಾಯಿಸುತ್ತಾ ಬಂದಿವೆ. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರ ಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ, ಜಲ ಸಂಪನ್ಮೂಲ ಸಚಿವ ಬಸವರಾಜಬೊಮ್ಮೋಯಿ ಬಳಿ ಸರ್ವಪಕ್ಷ ಹಾಗೂ ಸಂಘ ಸಂಸ್ಧೆಗಳ ಪ್ರತಿನಿಧಿಗಳ ನ್ನೊಳಗೊಂಡ ನಿಯೋಗವು ಮೂರು ಭಾರಿ ಬೇಟಿ ಮಾಡಿ ನೀರನ್ನು ಹರಿಸಲು ಕೇಳಿದಾಗ ಅವರು ಬರವಸೆ ನೀಡಿದರೆ ವಿನಃ ಇಲ್ಲಿಯವರೆಗೂ ಯೋಜನೆ ಕಾರ್ಯಗತ ವಾಗದ ಕಾರಣ ಹೋರಾಟ ಅನಿವಾರ್ಯವಾಗಿದೆ.  ಮಧುಗಿರಿ ಹಾಗೂ ಕೊರಟಗೆರೆ ತಾಲ್ಲೂಕು ಸಹ ಈ ಸಮಸ್ಯೆಗಳಿಂದ ಹೊರತಾಗಿಲ್ಲ ಎಂದರು.ಮಧುಗಿರಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಪಾಂಡುರಂಗಾರೆಡ್ಡಿ, ಎಪಿಎಂಸಿ ಅಧ್ಯಕ್ಷ ಎಂ.ಜಿ. ಶ್ರಿನಿವಾಸಮೂರ್ತಿ, ಬಿ.ವಿ.ನಾಗರಾಜಪ್ಪ, ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯೆ ಸುವರ್ಣಮ್ಮ, ಮಾಜಿ ಪುರಸಭಾ ಸದಸ್ಯ ಎಂ.ಪಿ.ಗಣೇಶ್, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ನಾಗೇಶ್‌ಬಾಬು, ಚಿ.ಸೂ.ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣ್ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.ವಕೀಲ ಪುರುಷೋತ್ತಮರೆಡ್ಡಿ, ಸುಬ್ಬರಾಯಪ್ಪ, ಕಿಸಾನ್ ಸಂಘದ ಅಧ್ಯಕ್ಷ ನಾಗಭೂಷಣರೆಡ್ಡಿ, ಮಾಜಿ ಶಾಸಕ ಸೋಮ್ಲನಾಯಕ, ಸಂಘಮ್ ಫೌಂಡೇಶನ್‌ನ ಜ್ಯೋತಿ, ಹನುಮಂತರಯಪ್ಪ, ಕೊಡಮಡುಗು ಲೋಕೇಶ್‌ಬಾಬು, ಮದಕರಿ ನಾಯಕ ಸೇನೆ, ಶ್ರಿರಾಮ ಸೇನೆ, ಶಕ್ತಿ ಕೇಂದ್ರ, ಮಹಿಳಾ ಸಂಘಟನೆಗಳು, ಅಂಗವಿಕಲರ ಸಂಘಟನೆ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry