ಕುಡಿಯುವ ನೀರಿಗಾಗಿ ಅವಳಿ ಗ್ರಾಮಸ್ಥರ ಧರಣಿ

7

ಕುಡಿಯುವ ನೀರಿಗಾಗಿ ಅವಳಿ ಗ್ರಾಮಸ್ಥರ ಧರಣಿ

Published:
Updated:

ಕೋಲಾರ: ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಪಾರೇಹೊಸಳ್ಳಿ ಮತ್ತು ತಿಪ್ಪೇಸಂದ್ರದ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ರಾಜ್ಯ ರೈತ ಸಂಘ-ಹಸಿರು ಸೇನೆ ಮುಖಂಡರ ನೇತೃತ್ವದಲ್ಲಿ ಧರಣಿ ನಡೆಸಿದರು.6 ತಿಂಗಳಿಂದ ನೀರಿನ ಸಮಸ್ಯೆ  ಬಗೆಹರಿದಿಲ್ಲ. ಹೊಸದಾಗಿ ಕೊರೆದಿರುವ ಕೊಳವೆಬಾವಿಯಲ್ಲಿ ಸಾಕಷ್ಟು ನೀರು ದೊರೆತಿದೆ. ಅದಕ್ಕೆ ವಿದ್ಯುತ್ ಸಂಪರ್ಕ ನೀಡಲು ಮತ್ತು ಪಂಪ್ ಅಳವಡಿಸಲು ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಆದರೆ ಕೆಲಸ ಮಾತ್ರ ನಡೆದಿಲ್ಲ. ಮೂರ‌್ನಾಲ್ಕು ಕಿ.ಮೀ. ನಡೆದು ನೀರು ತರುವಂಥ ಸನ್ನಿವೇಶ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿಗೆ ಒಮ್ಮೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು ದೂರವಾಣಿ ಮೂಲಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದೀಗ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇ ತಪ್ಪು ಎಂಬಂತೆ ಅಧಿಕಾರಿಗಳು, ಗುತ್ತಿಗೆದಾರರು ವರ್ತಿಸುತ್ತಿದ್ದಾರೆ. ಸ್ಥಳೀಯ ರಾಜಕಾರಣವೂ ಕೂಡ ಜನರ ಹಿತವನ್ನು ಕಾಯುತ್ತಿಲ್ಲ ಎಂದು ದೂರಿದರು.ಮನವಿ ಪಡೆದ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಬಾಬಣ್ಣ ಮಾತನಾಡಿ, ಒಂದು ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮಾರ್ಜೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ಸತೀಶ್,ನಾರಾಯಣಸ್ವಾಮಿ, ಶಿವಣ್ಣ, ಸತೀಶ್, ಮಂಜುನಾಥ್, ಮುನಿಸ್ವಾಮಿಗೌಡ, ಹಸಿರು ಸೇನೆಯ  ಶ್ರೀನಿವಾಸಗೌಡ, ನಾರಾಯಣಗೌಡ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry