ಕುಡಿಯುವ ನೀರಿಗಾಗಿ ಧರಣಿ

7

ಕುಡಿಯುವ ನೀರಿಗಾಗಿ ಧರಣಿ

Published:
Updated:
ಕುಡಿಯುವ ನೀರಿಗಾಗಿ ಧರಣಿ

ಕನಕಗಿರಿ: ಜನ ಸಮುದಾಯದ ಸಹಭಾಗಿತ್ವದಲ್ಲಿ 1.49 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ      ಜಲ ನಿರ್ಮಲ ಯೋಜನೆಯ ಕುಡಿಯುವ ನೀರಿನ ಕಾಮಗಾರಿ    ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್    ಮುಖಂಡರು ಇಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಮುಕುಂದರಾವ್ ಭವಾನಿಮಠ ಮಾತನಾಡಿ, ಕಾಮಗಾರಿ ಉದ್ಘಾಟನೆಗೊಂಡು ಐದಾರು ವರ್ಷಗಳೇ  ಉರುಳಿದರೂ ಜಲ ನಿರ್ಮಲ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ ಎಂದು ಹೇಳಿದರು.ಯೋಜನೆ ಜಾರಿಗೆ ತರುವುದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಮಾರ್ಚ್ 26ರಂದು ಐತಿಹಾಸಿಕ ಕನಕಾಚಲಪತಿ ದೇವಸ್ಥಾನದ ಜಾತ್ರೆ ನಡೆಯಲಿದ್ದು, ಪ್ರತಿ ವರ್ಷ ಜಾತ್ರೆಗೆ ಬರುವ     ಲಕ್ಷಾಂತರ ಭಕ್ತರು ನೀರಿನ ತೊಂದರೆ ಅನುಭವಿಸುವಂತಾಗಿದೆ. ಎರಡು ದಿನಗಳೊಳಗೆ ನೀರು ಬಿಡದಿದ್ದರೆ ಪಕ್ಷಭೇದ ಮರೆತು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಯುವ ಘಟಕದ ಅಧ್ಯಕ್ಷ ಶರಣಗೌಡ, ಮತ್ತಿತರರು ಹಾಜರಿದ್ದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry