ಕುಡಿಯುವ ನೀರಿಗಾಗಿ ಶಾಸಕರಿಗೆ ಘೇರಾವ್

7

ಕುಡಿಯುವ ನೀರಿಗಾಗಿ ಶಾಸಕರಿಗೆ ಘೇರಾವ್

Published:
Updated:
ಕುಡಿಯುವ ನೀರಿಗಾಗಿ ಶಾಸಕರಿಗೆ ಘೇರಾವ್

ಶಿರಾ: ತಾಲ್ಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಆಗ್ರಹಿಸಿ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸುವ ಮೂಲಕ ಶಾಸಕರಿಗೆ ಘೇರಾವ್ ಹಾಕಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆಯಿತು.ಸಮಾರಂಭವೊಂದಕ್ಕೆ ಆಗಮಿಸುತ್ತಿದ್ದ ಶಾಸಕ ಟಿ.ಬಿ.ಜಯಚಂದ್ರ ಅವರ ಕಾರಿನ ಮುಂಭಾಗಕ್ಕೆ ಹರಿಜನ ಕಾಲೊನಿ ಬಳಿ ಕಾದು ಕುಳಿತಿದ್ದ ನೂರಾರು ಮಹಿಳೆಯರು ಜಮಾಯಿಸಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿದರು.ಘಟನೆಯಿಂದ ಗಲಿಬಿಲಿಗೊಂಡ ಶಾಸಕರು, ಸ್ಥಳದಿಂದಲೇ ದೂರವಾಣಿ ಮೂಲಕ ಜಿಲ್ಲಾಧಿಕಾರಿ ಸಂಪರ್ಕಿಸಿ ಬೇಸಿಗೆ ಕಾಲವಾದ್ದರಿಂದ ಕುಡಿಯುವ ನೀರಿನ ಸಮಸ್ಯೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚುತ್ತಿದೆ. ತುರ್ತು ಅಗತ್ಯ ಇರುವ ಕಡೆ ಹೊಸದಾಗಿ ಕೊಳವೆ ಬಾವಿ ಕೊರೆಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು.ಇದಕ್ಕೆ ಜಿಲ್ಲಾಧಿಕಾರಿ ಆರ್.ಕೆ. ರಾಜು ಸಹ ಪೂರಕವಾಗಿ ಸ್ಪಂದಿಸಿದರು.ನಂತರ ನೆರೆದಿದ್ದ ಮಹಿಳೆಯರನ್ನು ಶಾಸಕ ಜಯಚಂದ್ರ ಸಮಾಧಾನಪಡಿಸಿದರು.ಶೀಘ್ರದಲ್ಲೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಮುತ್ತಿಗೆ ವಾಪಸ್ ಪಡೆಯಲಾಯಿತು.ಪ್ರತಿಭಟನೆಯಲ್ಲಿ ನಾದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪಿ.ಎಸ್.ಗಂಗಾಧರ, ಎನ್.ಸಿ. ದೊಡ್ಡಯ್ಯ, ಮಲ್ಲೇಶಪ್ಪ, ಲಕ್ಷಿದೇವಮ್ಮ ಸೇರಿದಂತೆ ಸ್ತ್ರೀಶಕ್ತಿ ಸಂಘದ ಮಹಿಳೆಯರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry