ಸೋಮವಾರ, ಡಿಸೆಂಬರ್ 16, 2019
17 °C
ನಾಲವಾರ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ

ಕುಡಿಯುವ ನೀರಿಗಾಗಿ ಹಾಹಾಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ:  `ಪಟ್ಟಣದ ಸಮೀಪ ಇರುವ ನಾಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬ್ಲಾಕ್ ಸಂಖ್ಯೆ1,2,3,4ರಲ್ಲಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ' ಎಂದು ಜಿಲ್ಲಾ ಕೋಲಿ ಸೈನ್ಯದ ಪ್ರಧಾನ ಕಾರ್ಯದರ್ಶಿ ಸಾಯಬಣ್ಣಾ ಜಾಲಗಾರ ಆರೋಪಿಸಿದ್ದಾರೆ.ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಇದರಿಂದ ಒಂದು ಬಿಂದಿಗೆ ನೀರು ತೆಗೆದುಕೊಳ್ಳಬೇಕಾದರೆ ಕನಿಷ್ಠ ಅರ್ಧ ಗಂಟೆ ಬೇಕಾಗುತ್ತದೆ ಎಂದು ಅಧಿಕಾರಿಗಳ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.`ಈ ತೆರೆದ ಬಾವಿಯ ನೀರಿನಲ್ಲಿ ಫ್ಲೋರೈಡ್ ಅಂಶವಿದೆ. ಆದರೂ ಅದನ್ನು ಬಳಸಲಾಗುತ್ತಿದೆ. ಕೂಡಲೇ ಗ್ರಾಮದ ಎಲ್ಲ ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು.ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಮಾಡಲಾಗುವುದು' ಎಂದು ಸ್ಥಳೀಯ ಘಟಕದ ಕೋಲಿ ಸೈನ್ಯದ ಅಧ್ಯಕ್ಷ ನಾಗರಾಜ ಸುಣಗಾರ, ಸದಸ್ಯರಾದ ಶಿವು ನಾಯಿಕೊಡಿ, ಹನುಮಂತ ಸುಗ್ಗಾ ಎಚ್ಚರಿಸಿದ್ದಾರೆ.

ಪ್ರತಿಕ್ರಿಯಿಸಿ (+)