ಶುಕ್ರವಾರ, ಜೂನ್ 18, 2021
28 °C

ಕುಡಿಯುವ ನೀರಿಗೆ ಆಗ್ರಹಿಸಿ ಮಹಿಳೆಯರಿಂದ ರಸ್ತೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡಿಯುವ ನೀರಿಗೆ ಆಗ್ರಹಿಸಿ ಮಹಿಳೆಯರಿಂದ ರಸ್ತೆ ತಡೆ

ಶ್ರೀನಿವಾಸಪುರ: ತಾಲ್ಲೂಕಿನ ರೋಜೇನಹಳ್ಳಿ ಗ್ರಾಮದ ಮಹಿಳೆಯರು ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಶನಿವಾರ ರೋಜೇನಹಳ್ಳಿ ಕ್ರಾಸ್‌ನಲ್ಲಿ ಖಾಲಿ ಬಿಂದಿಗೆ ಇಟ್ಟು ರಸ್ತೆ ತಡೆ ನಡೆಸಿದರು.

ರೋಜೇನಹಳ್ಳಿ ಗ್ರಾಮಕ್ಕೆ ಒಂದು ತಿಂಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ.

 

ಗ್ರಾಮಕ್ಕೆ ದೂರದ ಕೊಳವೆ ಬಾವಿಯಿಂದ ಕೊಳವೆ ಮೂಲಕ ಬರುವ ನೀರನ್ನು ಕ್ರಾಸ್‌ನಲ್ಲಿ ವಾಸವಾಗಿರುವ ಜನ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಗ್ರಾ.ಪಂ. ಅಧಿಕಾರಿಗಳು, ಜನ ಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಪ್ರಭಾವಿಗಳು ನೀರು ಬಳಸಿಕೊಳ್ಳುವುದನ್ನು ತಡೆಯುವಲ್ಲಿ ವಿಫಲರಾಗಿರುವ ಕೆಲವು ಗ್ರಾ.ಪಂ ಸದಸ್ಯರು ಕೊಳವೆ ಬಾವಿಗಳಿಗೆ ಅಳವಡಿಸಲಾಗಿರುವ ಪ್ಯಾನಲ್ ಬೋರ್ಡ್‌ಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.ಬೆಳಿಗ್ಗೆ ರಸ್ತೆ ತಡೆ ಮಾಡಿದ ಪರಿಣಾಮ ಶ್ರೀನಿವಾಸಪುರ- ಕೋಲಾರ ರಸ್ತೆಯಲ್ಲಿ ಬಹು ದೂರದ ವರೆಗೆ ವಾಹನಗಳು ನಿಂತಿದ್ದವು. ಪ್ರತಿಭಟನಗಾರರು ರಸ್ತೆಗೆ ದೊಡ್ಡ ಸಿಮೆಂಟ್ ಪೈಪ್‌ಗಳು, ಕಲ್ಲು, ಚಪ್ಪಡಿಗಳನ್ನು ಅಡ್ಡಹಾಕಿ ಟೈರ್‌ಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಯಾವುದೇ ವಾಹನ ಸಂಚರಿಸಲು ಸಾಧ್ಯವಾಗಲಿಲ್ಲ.ಅನಿರೀಕ್ಷಿತವಾಗಿ ನಡೆದ ರಸ್ತೆ ತಡೆಯಿಂದಾಗಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ದೂರದ ಸ್ಥಳಗಳಿಗೆ ಹೋಗುವ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಪ್ರತಿಭಟನಕಾರರು, ಪ್ರಯಾಣಿಕರ ಮಧ್ಯೆ ಮಾತಿನ ಚಕಮಕಿ ನಡೆಯಿತಾದರೂ, ಸಮಸ್ಯೆ ಬಗೆಹರಿಯದೆ ರಸ್ತೆಯನ್ನು ತೆರವುಗೊಳಿಸಲು ಮಹಿಳೆಯರು ನಿರಾಕರಿಸಿದರು.ಶ್ರೀನಿವಾಸಪುರದಿಂದ ಆಗಮಿಸಿದ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವಲ್ಲಿ ಸಫಲರಾದರು. ಅನಂತರ ರಸ್ತೆ ತಡೆ ಹಿಂಪಡೆಯಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.