ಶನಿವಾರ, ಡಿಸೆಂಬರ್ 7, 2019
21 °C
ದೇವನಹಳ್ಳಿ ಪುರಸಭೆಗೆ ಪೌರಾಡಳಿತ ಸಚಿವರ ದಿಢೀರ್‌ ಭೇಟಿ

ಕುಡಿಯುವ ನೀರಿಗೆ ಆದ್ಯತೆ ನೀಡಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡಿಯುವ ನೀರಿಗೆ ಆದ್ಯತೆ ನೀಡಲು ಸೂಚನೆ

ದೇವನಹಳ್ಳಿ: ‘ರಾಜ್ಯ ಸರ್ಕಾರ ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆ ಯಡಿಯಲ್ಲಿ ಸಾಕಷ್ಟು ಅನುದಾನ ನೀಡುತ್ತಿದ್ದು ಇದನ್ನು ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರ ಬಳಕೆಗೆ ಸೂಕ್ತ ರೀತಿಯಲ್ಲಿ ಅನುಷ್ಠಾನ ಗೊಳಿ ಸಬೇಕು’ ಎಂದು ರಾಜ್ಯ ಪೌರಾಡಳಿತ ಸಚಿವ ಖಮರುಲ್‌ ಇಸ್ಲಾಂ ಹೇಳಿದರು.ಬುಧವಾರ ದೇವನಹಳ್ಳಿ ಪುರಸಭೆಗೆ ಅನಿರೀಕ್ಷಿತ ಭೇಟಿ ನೀಡಿ ವಿವಿಧ ಯೋಜನೆಗಳ ಕಡತ ಪರಿ ಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು ‘ಕುಡಿಯುವ ನೀರಿನ ತುರ್ತು ಅಗತ್ಯಕ್ಕೆ ಪೌರಾಡಳಿತ ಇಲಾಖೆ ವತಿಯಿಂದ ನಲವತ್ತು ಕೋಟಿ ರೂಪಾಯಿ ಬಿಡುಗಡೆ ಮಾಡ ಲಾಗಿದೆ’ ಎಂದರು.‘ಈ ಅನುದಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 1.50 ಕೋಟಿ ರೂ ನೀಡಲಾಗಿದೆ. ಇದರಲ್ಲಿ ದೇವನಹಳ್ಳಿ ಪುರಸಭೆಗೆ 25 ಲಕ್ಷ ರೂ ಅನುದಾನ ನೀಡಲಾಗಿದೆ. ಇದು ಕುಡಿಯುವ ನೀರಿಗೆ ಆದ್ಯತೆ ನೀಡುವುದಕ್ಕಾಗಿಯೇ ಮಂಜೂರು ಮಾಡಲಾಗಿ ರುವ ಹಣ’ ಎಂದರು.

‘ಪುರಸಭೆ ವ್ಯಾಪ್ತಿಯಲ್ಲಿ ಸೂಕ್ತ ರೀತಿಯಲ್ಲಿ ಕಂದಾಯ ವಸೂಲಿ ಮಾಡಬೇಕು. ಸರ್ಕಾರದಿಂದ ದೊರಕುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಆಗ ಪ್ರತಿಯೊಂದು ಪುರ ಸಭೆ ಗಳೂ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ’ ಎಂದು ಸಚಿವರು ಅಭಿ ಪ್ರಾಯಪಟ್ಟರು.ಈ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ ಇರ ಬಾರದು. ಸರ್ಕಾರದ ಯೋಜನೆಯ ಹಣ ಸೂಕ್ತ ರೀತಿಯಲ್ಲಿ ವೆಚ್ಚವಾಗುತ್ತಿಲ್ಲ ಎಂಬುದು ಸರ್ಕಾರಕ್ಕೆ ಮನವರಿಕೆಯಾಗಿದೆ. ಎರಡು ಮೂರು ವರ್ಷಗಳ ಅನುದಾನ ಹಾಗೇ ಉಳಿದಿದೆ. ಬೀದಿ ದೀಪ, ಕುಡಿಯುವ ನೀರು ಪೂರೈಕೆ ಕ್ಷೇತ್ರಗಳಿಗೆ ಇಂತಹ ಹಣ ಶೇ. 100 ರಷ್ಟು ಬಳಕೆಯಾಗಿ ಪ್ರಗತಿ ಸಾಧಿಸಬೇಕು. ಸಾಂಕ್ರಾಮಿಕ ರೋಗಗಳಾದ ಮಲೇ ರಿಯಾ, ಡೆಂಗೆ ಮತ್ತು  ತ್ಯಾಜ್ಯ ನಿರ್ವಹಣೆಗೆ ಹೆಚ್ಚು ಗಮನ ನೀಡಬೇಕು ಅವರು ಅಧಿಕಾರಿಗಳಿಗೆ ಸೂಚಿ ಸಿದರು.ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ‘ದೇವನಹಳ್ಳಿ ಸುತ್ತಮುತ್ತಲ 15 ಗ್ರಾಮಗಳನ್ನು ದೇವನಹಳ್ಳಿ ಪುರಸಭೆ ವ್ಯಾಪ್ತಿಗೆ ಒಳಪಡಿಸಿ ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು’ ಎಂದು ಮನವಿ ಮಾಡಿದರು.ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರ ವಾಗಿದ್ದು, ಪರಿಶಿಷ್ಟರು, ಹಿಂದುಳಿದ ವರ್ಗದ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಕ್ಷೇತ್ರದ ಹೆಚ್ಚಿನ ಅಭಿವೃದಗೆ ಅನುದಾನದ ಪ್ರಮಾಣವನ್ನು ಏರಿಸಬೇಕಾದ ಅವಶ್ಯಕತೆ ಇದೆ. ಈ ದಿಸೆಯಲ್ಲಿ ಪೌರಾಡಳಿತ ಇಲಾಖೆಯಿಂದ ಹೆಚ್ಚುವರಿ ಅನುದಾನ ನೀಡಬೇಕು ಎಂದು ಅವರು ಕೋರಿ ದರು.‘ತಾಲ್ಲೂಕು ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳನ್ನು 1200 ಅಡಿಗಳವರೆಗೆ ತೋಡಿದರೂ ಅಂತರ್ಜಲ ಸಿಗುವುದು ಕಷ್ಟವಾಗುತ್ತಿದೆ.

ತಾಲ್ಲೂಕಿನಾದ್ಯಂತ ಈವರೆವಿಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ’ ಎಂದು ಸಚಿವರಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಟ್ಟರು. ಮುಖ್ಯಾಧಿಕಾರಿ ಎಂ.ಆರ್‌. ಮಂಜುನಾಥ್‌, ಪುರಸಭೆ ಸದಸ್ಯ ನರಸಿಂಹ ಮೂರ್ತಿ, ಜಿ.ಎ. ರವೀಂದ್ರ, ಎಂ.ಮೂರ್ತಿ, ಎಂ.ಕುಮಾರ್‌, ವಿ.ಗೋಪಾಲ್‌ ಇದ್ದರು.

ಪ್ರತಿಕ್ರಿಯಿಸಿ (+)