ಕುಡಿಯುವ ನೀರಿಗೆ ತತ್ವಾರ

7

ಕುಡಿಯುವ ನೀರಿಗೆ ತತ್ವಾರ

Published:
Updated:

ಚಿಕ್ಕಮಗಳೂರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ವಸ್ತಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ವಸ್ತಾರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೋಡೆಲ್ ಅಧಿಕಾರಿ ಗಂಗಾಧರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ಅವ್ಯವಸ್ಥೆ ಸರಿಪಡಿಸುವಂತೆ ತೊಂಡವಳ್ಳಿ, ಬಾಚಿಗನಹಳ್ಳಿ, ಆಲದಗುಡ್ಡೆ, ಮಂಗಳವಾರಪೇಟೆ ಮತ್ತು ವಸ್ತಾರೆ ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದರು.ಕುಡಿಯುವ ನೀರನ ಸಮಸ್ಯೆ ನಿವಾರಣೆಗೆ ಅನುದಾನ ನೀಡುವುದಾಗಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಈರಮ್ಮ ಭರವಸೆ ನೀಡಿದರು.ಈಗಾಗಲೇ ಒತ್ತುವರಿಯಾಗಿರುವ ಸ್ಮಶಾನ ಜಾಗವನ್ನು ತೆರವುಗೊಳಿ ಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಗ್ರಾಮಸ್ಥರು ಮನವಿ ಮಾಡಿದರು.ಗ್ರಾಮ ಠಾಣಾ ಜಾಗವನ್ನು ಖುಲ್ಲಾ ಪಡಿಸಿ ಜಾನುವಾರು ಮೇಯಲು ಅನುಕೂಲ ಕಲ್ಪಿಸಬೇಕೆಂದು ಗ್ರಾಮ ಲೆಕ್ಕಿಗರಿಗೆ ಮನವಿ ಸಲ್ಲಿಸಲಾಯಿತು.ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಹಣ ದುರುಪಯೋಗವಾಗಲಿದೆ ಎಂದು ಆರೋಪಿಸಿದ ಮಾಜಿ ಅಧ್ಯಕ್ಷ ಸತ್ಯನಾರಾಯಣ ತನಿಖೆ ನಡೆಸುವಂತೆ ಸಭೆಯಲ್ಲಿ ಒತ್ತಾಯಿಸಿದರು.ಪಂಚಾಯಿತಿ ವತಿಯಿಂದ ನೀಡಿದ ಗಿಡಗಳು ಸಮರ್ಪಕವಾಗಿ ವಿತರಣೆ ಯಾಗಿಲ್ಲ. ಈಗಾಗಲೇ ಗಿಡ ನೆಟ್ಟಿರು ವವರಿಗೆ ಹಣ ಬಿಡುಗಡೆಯಾ ಗಲ್ಲವೆಂಬ ದೂರುಗಳು ಕೇಳಿಬಂದವು.ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಮೀನಾಕ್ಷಿ, ಸದಸ್ಯರಾದ ನವೀನ, ಮಧುಸೂದನ್, ಚಂದ್ರು, ಪವಿತ್ರ, ಭಾರತಿ, ಲಲಿತ, ತಾಪಂ ಮಾಜಿ ಅಧ್ಯಕ್ಷ ಡಿ.ಜೆ.ಸುರೇಶ್, ಮುಖಂಡರಾದ ಸೋಮೇಗೌಡ, ನಾರಾಯಣಗೌಡ, ರವಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry