ಗುರುವಾರ , ಏಪ್ರಿಲ್ 15, 2021
22 °C

ಕುಡಿಯುವ ನೀರಿಗೆ ವರದಾನ: ಸಬ್ ಮಿಷನ್

ಪ್ರಜಾವಾಣಿ ವಾರ್ತೆ/ Updated:

ಅಕ್ಷರ ಗಾತ್ರ : | |

ಕುಡಿಯುವ ನೀರಿಗೆ ವರದಾನ: ಸಬ್ ಮಿಷನ್

ಸಿಂಧನೂರು: ಕಳೆದ ಎರಡು ದಶಕಗಳಿಂದ ಪ್ಲೋರೈಡ್ ಮಿಶ್ರಿತ ಕುಡಿಯುವ ನೀರಿನಿಂದ ಮೊಣಕಾಲುನೋವು ಸೇರಿದಂತೆ ಇತರೆ ಕೀಲುನೋವುಗಳು ತಾಲ್ಲೂಕಿನ ಜನತೆಯನ್ನು ಭಾದಿಸುತ್ತಿವೆ ಎಂದು ತಜ್ಞರ ವರದಿಯಿಂದ ದೃಢಪಟ್ಟ ಬಳಿಕ ಹುಟ್ಟಿಕೊಂಡ ಕನಸೇ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆ. ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಪ್ರಥಮಬಾರಿ ಶಾಸಕರಾಗಿದ್ದ ಸಮಯದಲ್ಲಿಯೇ ಶುದ್ಧನೀರು ಪೂರೈಕೆಗೆ ಪ್ರಯತ್ನಿಸಿದರು.ಹಲವು ವರ್ಷಗಳ ಪ್ರಯತ್ನದ ಫಲವಾಗಿ ಜಾರಿಗೆ ಬಂದಿರುವ ರಾಜೀವಗಾಂಧಿ ಸಬ್ ಮಿಷನ್ ಯೋಜನೆ ಸಿಂದನೂರು ತಾಲ್ಲೂಕಿನ ಪ್ಲೋರೈಡ್ ಸಮಸ್ಯೆಗೆ ಪರಿಹಾರ ಒದಗಿಸಲಿದ್ದು ಕುಡಿಯವ ನೀರಿಗೆ ವರದಾನವಾಗಲಿದೆ. ಬಸವರಾಜ ರಾಯರಡ್ಡಿ ಅವರು ಸಂಸದರಾಗಿದ್ದ ಸಮಯದಲ್ಲಿ ರಾಜೀವಗಾಂಧಿ ಸಬ್‌ಮಿಷನ್‌ಗೆ ಯೋಜನೆ ಮಂಜೂರಿಗೆ ಪ್ರಸ್ತಾಪನೆ ಸಲ್ಲಿಸಲಾಗಿತ್ತು. ವಿರೂಪಾಕ್ಷಪ್ಪ ಸಂಸದರಾದ ನಂತರ ಶಾಸಕ ಹಂಪನಗೌಡರ ಕನಸಿಗೆ ಸಾಕಾರರೂಪ ಸಿಕ್ಕಿತು.ತುಂಗಭದ್ರಾ ನದಿ ಮತ್ತು ಎಡದಂಡೆ ಕಾಲುವೆಯಿಂದ ಸುಮಾರು 100 ಹಳ್ಳಿಗಳಿಗೆ ನೀರು ಪಡೆಯುವ ಉದ್ದೇಶದಿಂದ ಯೋಜನೆಗಳನ್ನು ರೂಪಿಸಿದ್ದು ಅದರಲ್ಲಿ ಗೊರೇಬಾಳ ಮತ್ತು ದಡೇಸುಗೂರು ಯೋಜನೆಗಳು ಮುಗಿಯುವ ಹಂತದಲ್ಲಿವೆ.ಬೋಗಾಪುರ, ಕುರಕುಂದಾ, ಆರ್.ಎಚ್.ಕ್ಯಾಂಪ್.ನಂ.1ರ ಯೋಜನೆಗಳು ಪ್ರಗತಿಯಲ್ಲಿವೆ ದಡೇಸುಗೂರು ವಿತರಣಾ ಕೇಂದ್ರದಿಂದ ಸಾಸಲಮರಿಕ್ಯಾಂಪ್, ಸಾಸಲಮರಿ, ಬೂದಿವಾಳ, ಶ್ರೀಪುರಂಜಂಕ್ಷನ್, ಹೊಸಳ್ಳಿ.ಇ.ಜೆ, ಅಮರಾಪುರ ಸೇರಿ ಒಟು15 ಹಳ್ಳಿ, ಗೊರೇಬಾಳ ವಿತರಣಾ ಕೇಂದ್ರದಿಂದ 8, ತುರ್ವಿಹಾಳ ಕೇಂದ್ರದಿಂದ ಕಲ್ಮಂಗಿ, ಗುಂಜಳ್ಳಿಕ್ಯಾಂಪ್, ಹೊಸಳ್ಳಿ.ಕೆ., ಜಾಲಿಹಾಳ, ಗಾಂಧಿನಗರ ಒಟ್ಟು 33 ಹಳ್ಳಿ, ಬೋಗಾಪುರ ಕೇಂದ್ರದಿಂದ ಹತ್ತಿಗುಡ್ಡ, ಗುಡಿಹಾಳ, ಗುಂಡಾ, ಬೊಮ್ಮನಾಳ, ಹೊಗರನಾಳ, ಗುಡಿಹಾಳ, ಹೊಸೂರು, ವೀರಾಪುರ 13 ಹಳ್ಳಿ, ಒಟ್ಟು 106 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ.ರೌಡಕುಂದಾ, ಸಾಲಗುಂದಾ, ಸೋಮಲಾಪುರ, ಗೊರೇಬಾಳಕ್ಯಾಂಪ್, ಮಾವಿನಮಡು, ರಾಮಾಕ್ಯಾಂಪ್ ಒಟ್ಟು 8ಗ್ರಾಮ, ಆರ್.ಎಚ್.ವಿತರಣಾ ಕ್ಯಾಂಪ್ ವಿತರಣಾ ಕೇಂದ್ರದಿಂದ ಜವಳಗೇರಾ, ಹೆಡಗಿನಾಳ, ಚಿತ್ರಾಲಿ, ರಾಗಲಪರ್ವಿ, ಆಯನೂರು, ಬನ್ನಿಗೂರು, ಯಾಪಲಪರ್ವಿ, ಚಿಂತಮಾನದೊಡ್ಡಿ ಒಟ್ಟು 25 ಹಳ್ಳಿ, ದಡೇಸುಗೂರು ಯೋಜನೆಗೆ 10 ಕೋಟಿ, ತುರ್ವಿಹಾಳಗೆ 21ಕೋಟಿ, ಗೊರೇಬಾಳಗೆ 12 ಕೋಟಿ, ಬೋಗಾಪುರ ಕೇಂದ್ರಕ್ಕೆ 6.70ಕೋಟಿ, ಆರ್.ಎಚ್.ಕ್ಯಾಂಪ್ ಯೋಜನೆಗೆ 14.5ಕೋಟಿ ಹಣ ಬಿಡುಗಡೆಯಾಗಿದೆ.ಮುಕ್ಕುಂದಾ ಕೇಂದ್ರಕ್ಕೆ 10 ಕೋಟಿ, ಉದ್ಬಾಳ ಪಂಚಾಯಿತಿ ವ್ಯಾಪ್ತಿಗೆ 5 ಕೋಟಿ, ಕುರಕುಂದಾ ವಿತರಣಾ ಕೇಂದ್ರಕ್ಕೆ 15ಕೋಟಿ ಬಿಡುಗಡೆಯಾಗಬೇಕಿದೆ. ಬುದ್ದಿನ್ನಿ ಮತ್ತು ಇತರ 6 ಗ್ರಾಮಗಳಿಗೆ 6.5ಕೋಟಿ, ತಿಪ್ಪನಹಟ್ಟಿ ಮತ್ತು ಇತರ ಗ್ರಾಮಗಳಿಗೆ 18 ಕೋಟಿ ಹಣ ಮಂಜೂರು ಮಾಡುವಂತೆ ರಾಜ್ಯಮಟ್ಟದ ಕುಡಿಯುವ ನೀರಿನ ಆಯ್ಕೆ ಸಮಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಂಚಾಯತರಾಜ್ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಆರ್.ಗೌಡೂರು ತಿಳಿಸಿದ್ದಾರೆ.ಗೊರಬಾಳ ಮತ್ತು ದಡೇಸುಗೂರು ಯೋಜನೆಗಳನ್ನು ಅಗಸ್ಟ್ ಕೊನೆಯ ವಾರದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುವ ತುರ್ವಿಹಾಳ ಯೋಜನೆಗೆ ಭೂಮಿ ವಿಷಯದಲ್ಲಿ ಸ್ವಲ್ಪ ತೊಡಕಾಗಿದ್ದು ಇಷ್ಟರಲ್ಲಿಯೇ ಅದನ್ನು ಸಹ ಚುರುಕುಗೊಳಿಸಲಾಗುವುದು ಬೋಗಾಪುರ ಮತ್ತು ಆರ್.ಎಚ್.ಕ್ಯಾಂಪ್ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಗೌಡೂರು ವಿವರಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.