ಕುಡಿಯುವ ನೀರಿನಲ್ಲಿ ಚರಂಡಿ ನೀರು: ದೂರು

7

ಕುಡಿಯುವ ನೀರಿನಲ್ಲಿ ಚರಂಡಿ ನೀರು: ದೂರು

Published:
Updated:

ಕುಶಾಲನಗರ: ಜಲಮಂಡಳಿ ವತಿಯಿಂದ ಪಟ್ಟಣದ ಗ್ರಾಹಕರಿಗೆ ಕುಡಿಯುವ ನೀರಿನೊಂದಿಗೆ ಚರಂಡಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಕುಶಾಲನಗರ ಗ್ರಾಹಕರ ವೇದಿಕೆ ದೂರು ನೀಡಿದೆ. ಪಟ್ಟಣದಲ್ಲಿ ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ರಸ್ತೆಯ ಎರಡು ಬದಿಯಲ್ಲೂ ಚರಂಡಿ ನೀರು ಹರಿ ಯದೆ ನಿಂತ ಪರಿಣಾಮ ಜಲ ಮಂಡಳಿಯ ಕೊಳವೆ ವಾಲ್ವ್‌ಗೆ ಹೊಂದಿಕೊಂಡ ಕಂಡಿಯ ಮೂಲಕ ಚರಂಡಿ ನೀರು ಕುಡಿಯುವ ನೀರಿನ ಪೈಪ್‌ನಲ್ಲಿ ಹಾಯ್ದು ನೀರು ಸರಬ ರಾಜಾದ ಬಹುತೇಕ ಮನೆಗಳಿಗೆ ಕಶ್ಮಲ ನೀರು ಪೂರೈಕೆಯಾಗಿದೆ ಎಂದು ಗ್ರಾಹಕರ ವೇದಿಕೆಯ ಅಧ್ಯಕ್ಷ ಎ.ಎ. ಚಂಗಪ್ಪ, ಸಂಚಾಲಕ ಕೆ.ಎ.ಅರುಣ್ ಮೊಣ್ಣಪ್ಪ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಪಟ್ಟಣದ ಜನತೆಗೆ ಕಶ್ಮಲ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಈ ಹಿಂದೆಯೇ ವೇದಿಕೆ ವತಿಯಿಂದ ಪಟ್ಟಣ ಪಂಚಾಯ್ತಿ, ಜಲಮಂಡಳಿಗೆ ಎಚ್ಚರಿಸಿದ ಪರಿಣಾಮ ಜಲಮಂಡಳಿ ಯು ತನ್ನ ಅಸಹಾಯಕತೆ ಪ್ರದರ್ಶಿಸಿ, ಇನ್ನು ಮುಂದೆ ಈ ರೀತಿಯ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದರೂ ಏನೂ ಪ್ರಯೋಜನವಾಗಿರುವುದಿಲ್ಲ ಎಂದು ವೇದಿಕೆಯ ಅಧ್ಯಕ್ಷ ಚಂಗಪ್ಪ ದೂರಿದ್ದಾರೆ.ಕುಡಿಯುವ ನೀರಿನ ಪೂರೈಕೆಯ ಗುಣಮಟ್ಟ ಪರೀಕ್ಷಿಸಲೆಂದು ವೇದಿಕೆ ವತಿಯಿಂದ ಪಟ್ಟಣ ಕಾಲೊನಿ ಮತ್ತು ಬಾಪೂಜಿ ಬಡಾವಣೆಯ ಸುತ್ತ ಮುತ್ತಲಿನ ಪ್ರದೇಶಕ್ಕೆ ತೆರಳಿದಾಗ ನಲ್ಲಿಯಿಂದ ಸರಬರಾಜಾದ ನೀರಿ ನೊಂದಿಗೆ ಚರಂಡಿ ನೀರು ಮಿಶ್ರಣ ಗೊಂಡಿರುವ ಬಗ್ಗೆ ಗ್ರಾಹಕರು ದೂರಿದರು ಎಂದು ವೇದಿಕೆಯ ಸಂಚಾಲಕ ಅರುಣ್ ಮೊಣ್ಣಪ್ಪ ತಿಳಿಸಿದರು. ಕುಡಿಯುವ ನೀರಿನೊಂದಿಗೆ ಚರಂಡಿ ನೀರು ಮಿಶ್ರಣಗೊಂಡು ಸರಬರಾಜಾದ ನೀರನ್ನು ಜಲ ಮಂಡಳಿಗೆ ಪರೀಕ್ಷಿಸಲು ತೆರಳಿದಾಗ ರಾಜ್ಯ ಹೆದ್ದಾರಿ ಚರಂಡಿ ನಿರ್ಮಾಣದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು,ರಸ್ತೆಯ ಬದಿಯಲ್ಲಿ ಚರಂಡಿ ನೀರು ಹರಿಯದೆ ಅಲ್ಲಲ್ಲಿ ನಿಂತ ಪರಿಣಾಮ ಈ ನೀರು ಜಲ ಮಂಡಳಿಯ ಕೊಳವೆಯೊಂದಿಗೆ ಸೇರಿ ಕೊಂಡು ಕಲುಷಿತ ನೀರು ಸರಬ ರಾಜಾಗಿರುವ ಅಂಶ ಬೆಳಕಿಗೆ ಬಂದಿದೆ ಎಂದು ಚಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.ಜಲಮಂಡಳಿ ವತಿಯಿಂದ ಕಲುಷಿತ ನೀರು ಪೂರೈಕೆ ಮಾಡುತ್ತಿರುವು ದರಿಂದ ನಾಗರಿಕರಿಗೆ ರೋಗ ರುಜಿನ ಗಳು ಬರುವ ಸಾಧ್ಯತೆ ಇದ್ದು, ಇದರಿಂದ ಮುಂದೆ ಉಂಟಾಗುವ ಕಷ್ಟನಷ್ಟಗಳಿಗೆ ಜಲಮಂಡಳಿ ಅಧಿಕಾರಿ ಗಳೇ ನೇರ ಹೊಣೆಯಾಗ ಬೇಕಾಗು ತ್ತದೆ ಎಂದು ಗ್ರಾಹಕರ ವೇದಿಕೆ ಎಚ್ಚರಿಕೆ ನೀಡಿದೆ. ಹೆದ್ದಾರಿ ರಸ್ತೆಯಂಚಿನಲ್ಲಿ ಕೂಡಲೇ ಚರಂಡಿ ನಿರ್ಮಿಸುವ ಮೂಲಕ ಕಲುಷಿತ ಚರಂಡಿ ನೀರು ಜಲ ಮಂಡಳಿಯ ಕೊಳವೆಗೆ ಹೋಗದಂತೆ ತಡೆಗಟ್ಟಬೇಕು. ಈ ಬಗ್ಗೆ ಜಿಲ್ಲಾಧಿ ಕಾರಿಗಳು, ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ತುರ್ತು ಗಮನ ಹರಿಸಿ, ಶುದ್ಧ ಕುಡಿ ಯುವ ನೀರು ಪೂರೈಕೆ ಮಾಡಬೇಕು ಎಂದು ವೇದಿಕೆಯ ಸಂಚಾಲಕ ಅರುಣ್ ಮೊಣ್ಣಪ್ಪ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry