ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ

7

ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ

Published:
Updated:

ಸಿರವಾರ: ಸಮೀಪದ ಅತ್ತನೂರು ಗ್ರಾಮದಲ್ಲಿ ದಿಡ್ಡಿ ಬಸವೇಶ್ವರ ದೇವಸ್ಥಾನದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮತ್ತು ಅತ್ತನೂರು ಗ್ರಾಮದಿಂದ ಆಂಜನೇಯ ಕ್ಯಾಂಪ್‌ವರೆಗೆ ರಸ್ತೆ ದುರಸ್ತಿ ಕಾಮಗಾರಿಗೆ ಬಿಜೆಪಿ ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕಾರ ಮತ್ತು ಹನುಮಂತರಾಯ ಅವರು  ಭಾನುವಾರ ಭೂಮಿಪೂಜೆ ಮಾಡಿದರು.ಜಿಲ್ಲಾ ಪಂಚಾಯಿತಿ ಅನುದಾದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ರೂ.9ಲಕ್ಷ ಮತ್ತು ರಸ್ತೆ ದುರಸ್ತಿಗೆ ರೂ.5ಲಕ್ಷ ನೀಡಲಾಗಿದ್ದು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರೈಸುವಂತೆ ಸೂಚಿಸಿದ್ದಾಗಿ ಹನುಮಂತರಾಯ ತಿಳಿಸಿದರು.

ಎಪಿಎಂಸಿ ನಿರ್ದೇಶಕ ನಾಗನಗೌಡ, ಶಿವಾಜಿರಾವ್ ದರ್ಶನಕರ್, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಸಿರವಾರ ವಿಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷ ಎನ್.ಚಂದ್ರಶೇಖರ, ಪ್ರಸಾದ್ ಮತ್ತು ಗುತ್ತಿಗೆದಾರ ಶರಣಬಸವ ಮರ್ಚ್‌ಟ್‌ಹಾಳ ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry