ಕುಡಿಯುವ ನೀರಿನ ಬವಣೆಗೆ ಒಡೆದ ಪೈಪ್ ಪರಿಹಾರ!

7

ಕುಡಿಯುವ ನೀರಿನ ಬವಣೆಗೆ ಒಡೆದ ಪೈಪ್ ಪರಿಹಾರ!

Published:
Updated:
ಕುಡಿಯುವ ನೀರಿನ ಬವಣೆಗೆ ಒಡೆದ ಪೈಪ್ ಪರಿಹಾರ!

ಹೊನ್ನಾವರ ತಾಲ್ಲೂಕಿನ ಕರ್ಕಿ ಸಮೀಪ ರಾಷ್ಟ್ರೀಯ ಹೆದ್ದಾರಿ 17ಕ್ಕೆ ಹೊಂದಿಕೊಂಡಿರುವ ಕೋಣಕಾರನಲ್ಲಿ ಕುಡಿಯುವ ನೀರಿಗಾಗಿ ಜನರು ಪರಿತಪಿಸುತ್ತಿದ್ದು ತಮ್ಮ ದಾಹ ತೀರಿಸಿಕೊಳ್ಳಲು ಇವರು ಸುಮಾರು ಅರ್ಧ ಕಿ.ಮೀ.ದೂರದಲ್ಲಿ ಅಳವಡಿಸಲಾಗಿರುವ ಮರಾಕಲ್ ನೀರಿನ ಪೈಪ್‌ನ್ನೇ ಅವಲಂಬಿಸುವಂತಾಗಿದೆ.

ಕುಮಟಾ ಹಾಗೂ ಹೊನ್ನಾವರ ಪಟ್ಟಣಗಳಿಗೆ ಕುಡಿಯುವ ನೀರನ್ನು ಪೂರೈಸುವ ಈ ಮರಾಕಲ್ ಯೋಜನೆಯ ನೀರಿನ ಪೈಪ್‌ನ್ನು ರಾಷ್ಟ್ರೀಯ ಹೆದ್ದಾರಿಯ ಗುಂಟ ಅಳವಡಿಸಲಾಗಿದ್ದು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಡಿಕ್ಕಿಯಿಂದಾಗಿ ಈ ಪೈಪ್ ಒಡೆಯುವುದು ಸಾಮಾನ್ಯ ಸಂಗತಿಯಾಗಿದೆ. ಹೀಗೆ ಅಪಘಾತದಲ್ಲಿ ಒಂದೆಡೆ ಒಡೆದಿರುವ ಪೈಪ್ ಆಸುಪಾಸಿನ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಕೆಲಮಟ್ಟಿಗೆ ನಿವಾರಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪೈಪ್ ಒಡೆಯುತ್ತಿರಲಿ ಎಂಬುದೂ ಇವರ ಒಳಗಿನ ಆಶಯ!

“ನಮ್ಮ ಊರಿನಲ್ಲಿ  ಸುಮಾರು 20 ಮನೆಗಳಿವೆ. ನಮ್ಮ ಊರಿನ ಎಲ್ಲ ಬಾವಿಗಳ ನೀರು ಉಪ್ಪಾಗಿದ್ದು ನಾವು ಕುಡಿಯುವ ನೀರಿಗೆ ಇದನ್ನೇ ಆಶ್ರಯಿಸಿದ್ದೇವೆ” ಎಂದು ಒಡೆದ ಪೈಪ್‌ನಿಂದ ಕೊಡದಲ್ಲಿ ನೀರನ್ನು ಹಿಡಿಯುತ್ತಿದ್ದ ಮಹಿಳೆಯೊಬ್ಬರು ಹೇಳಿದರು.

ಒಡೆದ ಪೈಪ್ ಸರಿಯಾಗಬಹುದೆ? ಕೋಣಕಾರಿಗೆ ಕುಡಿಯುವ ನೀರಿನ ಪೂರೈಕೆಯಾಗಬಹುದೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry