ಸೋಮವಾರ, ಜೂನ್ 14, 2021
27 °C

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ಶಿರಹಟ್ಟಿ ತಾಲ್ಲೂಕಿನಲ್ಲಿ ಭೀಕರ ಬರಗಾಲ ಉಂಟಾಗಿದ್ದು ಕೆಲವು ಹಳ್ಳಿಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿದೆ. ಆದರೆ ಅಧಿಕಾರಿಗಳು ಗ್ರಾಮೀಣ ಪ್ರದೇಶ ಗಳತ್ತ ಹೆಚ್ಚಿನ ಗಮನ ನೀಡುತ್ತಿಲ್ಲ ಎಂದು  ಶಿರಹಟ್ಟಿಯಲ್ಲಿ ಜರುಗಿದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಚೆನ್ನಪ್ಪ ಜಗಲಿ ಹಾಗೂ ಕೋಟೆಪ್ಪ ವರ್ದಿ ಆಗ್ರಹಿಸಿದರು.   `ಭಾಗ್ಯಲಕ್ಷ್ಮೀ ಬಾಂಡ್ ವಿತರಿಸುವಲ್ಲಿ ಕೆಲವರು ಹಣ ಕೇಳುತ್ತಿರುವ ಕುರಿತು ಮಾಹಿತಿ ಇದ್ದು ಆ ಕುರಿತು ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.`ಕೆಲ ಗ್ರಾಮ ಪಂಚಾಯಿತಿಗಳಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ಜನತೆ ವಲಸೆ ಹೋಗುವುದು ನಿಂತಿಲ್ಲ. ಎಲ್ಲ ಗ್ರಾಮ ಪಂಚಾಯಿತಿ ಗಳಲ್ಲಿ ಸುಗಮವಾಗಿ ಉದ್ಯೋಗ ಖಾತ್ರಿಯಡಿ ಕಾಮಗಾರಿ ನಡೆಯುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು~ ಎಂದು ಸದಸ್ಯರಾದ ನಿಂಬಣ್ಣ ಮಡಿವಾಳರ ಹಾಗೂ ತಿಮ್ಮರೆಡ್ಡಿ ಅಳವಂಡಿ ಒತ್ತಾಯಿಸಿದರು.`ಸೂರಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಕಾರಣ  ಕೂಡಲೇ ಆಸ್ಪತ್ರೆಗೆ ವೈದ್ಯ ರನ್ನು ನೇಮಕ ಮಾಡಬೇಕು~ ಎಂದು ಕೋಟೆಪ್ಪ ವರ್ದಿ ಆರೋಗ್ಯ ಇಲಾಖೆ ಯನ್ನು ಒತ್ತಾಯಿಸಿದರು.`ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭ ವಾಗಲಿದ್ದು ಸಂಜೆ 6ರಿಂದ 10ರವರೆಗೆ ವಿದ್ಯುತ್ ನಿಲುಗಡೆ ಮಾಡಬಾರದು~ ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವನಗೌಡ ಕಂಠಿಗೌಡ್ರ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರು.ಉಪಾಧ್ಯಕ್ಷೆ ಗಂಗವ್ವ ಲಮಾಣಿ ಹಾಗೂ ಸದಸ್ಯರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್. ಹಂಪಣ್ಣ, ಇಲಾಖೆಗಳ ಅಧಿಕಾರಿಗಳು ಹಾಜ ರಿದ್ದರು. ತಾಲ್ಲೂಕು ಪಂಚಾಯಿತಿ ಕಚೇರಿ ಅಧಿಕಾರಿ ಚೌಡಿ ಸ್ವಾಗತಿಸಿ ವಿಷಯ ಪ್ರಸ್ತಾಪಿಸಿದರು.ದಿಂಡಿ ಮಹೋತ್ಸವ

ಲಕ್ಷ್ಮೇಶ್ವರ: ಪಟ್ಟಣದ ಪಾಂಡುರಂಗ ದೇವಸ್ಥಾನದಲ್ಲಿ ಮಾ.14ರಂದು ರಾತ್ರಿ 9-30ಕ್ಕೆ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ದಿಂಡಿ ಮಹೋತ್ಸವ ಜರುಗಲಿದೆ. ಸಮಾ ರಂಭದ ಅಂಗವಾಗಿ ಸನ್ಮಾನ ಮತ್ತು ಸಂತವಾಣಿ ಸಂಗೀತ ಕಾರ್ಯ ಕ್ರಮ ಏರ್ಪಡಿಸಲಾಗಿದೆ.ಭಾವಸಾರ ಕ್ಷತ್ರಿಯ ಸಮಾಜದ ಪಂಚ ಕಮಿಟಿ ಅಧ್ಯಕ್ಷ ಫಕ್ಕೀರಪ್ಪ ಭೋಮಲೆ ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು ರಾಜ್ಯ ಯುವ ಕಾಂಗ್ರೆಸ್ ಧುರೀಣ ಆನಂದಸ್ವಾಮಿ ಗಡ್ಡದೇವರಮಠ, ಕೆಸಿಸಿ ಬ್ಯಾಂಕಿನ ನಿರ್ದೇಶಕ ಸುನೀಲ ಮಹಾಂತಶೆಟ್ಟರ, ಯುವ ನಾಯಕ ಚಂದ್ರಶೇಖರ ಲಮಾಣಿ, ಶಂಕರ ಸೇವಾ ಸಮಿತಿ ಅಧ್ಯಕ್ಷ ವಿ.ಎಲ್. ಪೂಜಾರ, ಚಂದ್ರಶೇಖರ ಮಹಾಜನಶೆಟ್ಟರ, ಮಹೇಶ ಹೊಗೆಸೊಪ್ಪಿನ, ದಾದಾಪೀರ ಮುಚ್ಛಾಲೆ, ನಾರಾಯಣಸಾ ಪವಾರ, ಜಿ.ಆರ್. ಪುರಾಣಿಕಮಠ, ಸಂತೋಷ ಗೋಗಿ, ಧರ್ಮಚಂದ ಮುಥಾ ಅತಿಥಿಗಳಾಗಿ ಆಗಮಿಸುವರು.ಇದೇ ಸಂದರ್ಭದಲ್ಲಿ ಸಿರ್ಸಿಯ ಸೋಮನಮನೆ ಶ್ರೀಪಾದ ಹೆಗಡೆ, ಬಕುಲಾ ಹೆಗಡೆ, ಮಂಜುನಾಥ ಮೊಟಿನಸರ ಅವರಿಂದ ಸಂತವಾಣಿ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.