ಕುಡಿಯುವ ನೀರು; ಅಧಿಕಾರಿಗಳಿಗೆ ಸೂಚನೆ- ಶಾಸಕ

7

ಕುಡಿಯುವ ನೀರು; ಅಧಿಕಾರಿಗಳಿಗೆ ಸೂಚನೆ- ಶಾಸಕ

Published:
Updated:

ಶ್ರೀರಂಗಪಟ್ಟಣ: ಬೇಸಿಗೆ ಶುರು ವಾಗಿದ್ದು ನೀರಿನ ಸಮಸ್ಯೆ ತಲೆ ದೋರುವ ಸಾಧ್ಯತೆ ಇರುವುದರಿಂದ ನೀರಿನ ಕೊರತೆ ಎದುರಾಗದಂತೆ ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸ ಲಾಗಿದೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.ತಾಲ್ಲೂಕಿನ ಮಲ್ಲೇಗೌಡನ ಕೊಪ್ಪಲು ಗ್ರಾಮದಲ್ಲಿ ಭಾನುವಾರ ಶ್ರೀರಾಮ ಮಂದಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಜನರಿಗೆ ಹಾಗೂ ದನ, ಕರುಗಳಿಗೆ ಸಮರ್ಪಕ ಕುಡಿ ಯುವ ನೀರಿನ ತೊಂದರೆ ಉಂಟಾ ದಂತೆ ಎಚ್ಚರ ವಹಿಸಬೇಕು. ಜಿ.ಪಂ. ಹಾಗೂ ಸ್ಥಳೀಯ ಗ್ರಾ.ಪಂ.ಗಳು ಮುನ್ನೆಚ್ಚರಿಕೆ ವಹಿಸಬೇಕು. ಜನರಿಂದ ದೂರು ಬರದಂತೆ ನೋಡಿಕೊಳ್ಳಬೇಕು ಎಂದರು. ಮಲ್ಲೇಗೌಡನಕೊಪ್ಪಲು ಸಮುದಾಯ ಭವನ ನಿರ್ಮಾಣಕ್ಕೆ ರೂ.1.5 ಲಕ್ಷ ಹಣ ಬಿಡುಗಡೆ ಮಾಡಿದ್ದು, ಅಗತ್ಯ ಬಿದ್ದರೆ ಮತ್ತಷ್ಟು ನೆರವು ಕೊಡುತ್ತೇನೆ ಎಂದು ಭರವಸೆ ನೀಡಿದರು.ಗ್ರಾ.ಪಂ. ಅಧ್ಯಕ್ಷ ಎಸ್.ಎಂ. ಮಲ್ಲೇಶ್, ಸದಸ್ಯರಾದ ಎಂ.ಕೆ. ಶಿವಕುಮಾರ್, ಎಂ.ಸಿ.ಯೋಗೇಶ್, ಮಹದೇವಮ್ಮ, ಪುಟ್ಟರಾಜು, ಎಂ.ಪಿ.ಲೋಕೆಶ್, ಎಂ.ಮರೀಗೌಡ, ನಿಂಗೇಗೌಡ, ಬಸವರಾಜು, ಎಂ.ಪಿ. ಸಿದ್ದೇಗೌಡ, ಶಂಕರೇಗೌಡ, ಮಲ್ಲಿಕಾ ರ್ಜುನ, ಚಂದ್ರು, ಎನ್.ಮಂಜುನಾಥ್ ಇತರರು ಇದ್ದರು.ಪ್ರಥಮ ದರ್ಜೆ ಕಾಲೇಜು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಸುಭಾಷ್‌ಚಂದ್ರ ಬೋಸ್ ಜನ್ಮ ದಿನಾಚರಣೆ ಕಾರ್ಯಕ್ರಮ ಶನಿವಾರ ನಡೆಯಿತು.ವಕೀಲ ಸಿ.ಎಂ.ಮೂರ್ತಿ ಸ್ವಾಮಿ ವಿವೇಕಾನಂದರನ್ನು ಕುರಿತು ಮಾತ ನಾಡಿದರು. ಪ್ರೊ.ಜ್ಞಾನದೇವಸ್ವಾಮಿ ಸುಭಾಷ್‌ಚಂದ್ರ ಬೋಸ್ ಅವರ ರಾಷ್ಟ್ರಪ್ರೇಮ, ಶಿಸ್ತು, ಸಂಕಲ್ಪ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಪ್ರಾಂಶುಪಾಲ ಪ್ರೊ.ಎಂ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಅನಂತ ಶರ್ಮಾ, ಸೋಮಣ್ಣ, ಬಿ.ನರಸಿಂಹಸ್ವಾಮಿ, ರೂಪಾ, ರೋಹಿ, ದೈಹಿಕ ಶಿಕ್ಷಣ ನಿರ್ದೇಶಕ ಹನುಮಂತಪ್ಪ, ಎನ್‌ಎಸ್‌ಎಸ್ ಅಧಿಕಾರಿ ಕಾಂತರಾಜು, ಮುಸ್ತಫಾ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry