ಕುಡಿಯುವ ನೀರು, ಉದ್ಯೋಗಕ್ಕೆ ಒತ್ತು

7

ಕುಡಿಯುವ ನೀರು, ಉದ್ಯೋಗಕ್ಕೆ ಒತ್ತು

Published:
Updated:

ಗದಗ: ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ಕುಡಿಯುವ ನೀರು ಮತ್ತು ಉದ್ಯೋಗಕ್ಕೆ ಒತ್ತು ನೀಡ ಲಾಗುವುದು ಎಂದು ಜಿಲ್ಲಾ ಪಂಚಾ ಯಿತಿ ನೂತನ ಅಧ್ಯಕ್ಷ ಎಂ.ಎಸ್. ಪಾಟೀಲ ಹೇಳಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಎಲ್ಲ ಸದಸ್ಯರು ಮತ್ತು ಶಾಸಕರ ಸಲಹೆ ಪಡೆದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದರ ಜತೆಗೆ ಮಾದರಿ ಜಿಲ್ಲಾ ಪಂಚಾಯಿತಿ ಮಾಡಲಾಗುವುದು ಎಂದು ಭರವಸೆ ನೀಡಿದರು.ಸಚಿವ ಕಳಕಪ್ಪ ಬಂಡಿ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯನ್ನು ಪ್ರಗತಿಪಥದತ್ತ ಕೊಂಡಯ್ಯಬೇಕು ಎಂದು ಸಲಹೆ ನೀಡಿದರು.ಬರ ನಿರ್ವಹಣೆ ಕಾಮಗಾರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷ ಎಂಬ ತಾರತಮ್ಯ ಮಾಡದೇ ಸಚಿವರು, ಶಾಸಕರ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ಪಡೆದು ಜಿಲ್ಲಾ ಪಂಚಾಯಿತಿ ಉತ್ತಮ ಹೆಸರು ತರಬೇಕು. ಆಡಳಿತದಲ್ಲಿ ಶಾಸಕರು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

ಉಪಾಧ್ಯಕ್ಷ ರಮೇಶ ಮುಂದಿನಮನಿ, ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್.ಕರಿಗೌಡ್ರ ಹಾಜರಿದ್ದರು.ಅಭಿನಂದನೆ: ನರಗುಂದ ತಾಲ್ಲೂಕು ಚಿಕ್ಕನರಗುಂದ ಕ್ಷೇತ್ರದ ಎಂ.ಎಸ್.ಪಾಟೀಲ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ  ಅಭಿಮಾನಿಗಳು ಸಿಹಿ ವಿತರಿಸಿ ಪರಸ್ಪರ ಬಣ್ಣ ಬಳಿದುಕೊಂಡು ಸಂಭ್ರಮ ಪಟ್ಟರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಎಂ.ಎಸ್.ದೊಡ್ಡಗೌಡ್ರ ಮತ್ತು ಪಾಟೀಲ ನಡುವೆ ಪೈಪೋಟಿ ಇದ್ದರಿಂದ್ದ ಮುಖಂಡರು ಕಳೆದ ಬಾರಿಯಂತೆ ಮತ್ತೆ ಒಳಒಪ್ಪಂದ ಸೂತ್ರ ರೂಪಿಸಿ ತಲಾ 10 ತಿಂಗಳ ಅವಧಿ ನಿಗದಿಪಡಿಸಿದರು.ಎಂ.ಎಸ್. ಪಾಟೀಲ: ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾಗಿರುವ 44 ವರ್ಷದ ನರಗುಂದ ತಾಲ್ಲೂಕು ಚಿಕ್ಕನರಗುಂದ ಕ್ಷೇತ್ರದ ಎಂ.ಎಸ್. ಪಾಟೀಲ ಅವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.

ನರಗುಂದ ಶಾಸಕ ಸಿ.ಸಿ.ಪಾಟೀಲ ರಾಜಕೀಯ ಗುರು. 1993ರಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇದೆ. ತಾಲ್ಲೂಕು ಪಂಚಾಯಿತಿ ಸ್ಪರ್ಧಿಸಿ ಸೋಲನುಭವಿದ್ದರು.ಬಿಎ ಪದವಿ ಪಡೆದಿರುವ ಪಾಟೀಲ, ಎಲ್‌ಎಲ್‌ಬಿ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾದರು.ರಮೇಶ್ ಮುಂದಿನಮನಿ: ಇವರ ಹುಟ್ಟೂರು ರೋಣ ತಾಲ್ಲೂಕಿನ ಹಾಲಕೆರೆ. ಬಿಎಸ್‌ಸಿ ವ್ಯಾಸಂಗ ಅರ್ಧಕ್ಕೆ ನಿಲ್ಲಿಸಿ ರಾಜಕೀಯದಲ್ಲಿ ತೊಡಗಿಸಿ ಕೊಂಡರು. 1994ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾ ಗುವ ಮೂಲಕ ರಾಜಕೀಯ ಪ್ರವೇಶಿಸಿದರು. ರೋಣ ತಾಲ್ಲೂಕಿನ ನಿಡುಗಂದಿ ಕ್ಷೇತ್ರದಿಂದ ಪ್ರಥಮ ಬಾರಿಗೆ ಸ್ಪರ್ಧಿಸಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry