ಭಾನುವಾರ, ಏಪ್ರಿಲ್ 11, 2021
23 °C

ಕುಡಿಯುವ ನೀರು ಸಮಸ್ಯೆ ಆಗದಂತೆ ನೋಡಿಕೊಳ್ಳಿ: ಬೆಳಮಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್:  ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಇರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಖಾತೆ ಸಚಿವ ರೇವುನಾಯಕ ಬೆಳಮಗಿ ಬುಧವಾರ ಅಧಿಕಾರಿಗಳಿಗೆ  ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ, ತಾಲ್ಲೂಕುವಾರು ಕಳೆದ ಬರ ಅವಧಿಯಲ್ಲಿ ಕೊರೆಸಲಾಗಿರುವ ಕೊಳವೆ ಬಾವಿಗಳು, ಅವುಗಳಲ್ಲಿ ವಿಫಲವಾದ ಕೊಳವೆ ಬಾವಿಗಳ ಮಾಹಿತಿ ಪಡೆದರು.`ನೀರು ಪೂರೈಕೆ ಸಮಸ್ಯೆ ಬಗೆಹರಿಸಲು ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿ ಗಮನಕ್ಕೆ ತಂದು ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚನೆ  ನೀಡಿದರು.ಔರಾದ್ ತಾಲೂಕಿನ ಹೊಳ ಸಮುದ್ರ ಗ್ರಾಮದಲ್ಲಿ ನೀರು ಪೂರೈಕೆ ಯೋಜನೆಯಡಿ ಕಾಮಗಾರಿ ಮುಗಿಯದಿದ್ದರೂ ಹಣ ಪಾವತಿ ಮಾಡಲಾಗಿದೆ ಎಂಬುದಕ್ಕೂ ಅವರು ತಕರಾರು ತೆಗೆದರು. `ಎಂಥ ಅಧಿಕಾರಿ ಇದ್ದೀ. ಕಳಪೆ ಪೈಪು ಹಾಕಿದ್ದಾರೆ ಎಂದು ಹೇಳಿದಿ. ಹಣ ಬಿಡುಗಡೆಯಾಗಿದಿ ಎಂದು ಹೇಳುತ್ತಿದ್ದೀ~ ಎಂದು ತರಾಟೆಗೆ ತೆಗೆದು   ಕೊಂಡರು.ಇದಕ್ಕೆ ದನಿಗೂಡಿಸಿದ ಜಿಲ್ಲಾಧಿಕಾರಿ ಸಮೀರ್‌ಶುಕ್ಲಾ ಅವರು, `ಬಾಕಿ ಇದೆ ಎನ್ನಲಾದ ಶೇ 25ರಷ್ಟು ಹಣವನ್ನು ಬಿಡುಗಡೆ ಮಾಡಬಾರದು. ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗೆ   ತಿಳಿಸಿದರು.ಇದೇ ಸಂದರ್ಭದಲ್ಲಿ  ಔರಾದ್ ತಾಲ್ಲೂಕಿನಲ್ಲಿ 17,  ಬೀದರ್ ತಾಲ್ಲೂಕು 9, ಭಾಲ್ಕಿ ತಾಲ್ಲೂಕಿನಲ್ಲಿ  14 ಬೋರ್‌ವೆಲ್‌ಗಳು ವಿಫಲವಾಗಿವೆ ಎಂದು ಅಧಿಕಾರಿಗಳು ಇದೇ ಸಂದರ್ಭದಲ್ಲಿ ಸಭೆಗೆ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.