ಕುಡಿಯುವ ನೀರು ಸಮಸ್ಯೆ: ಸಹಾಯವಾಣಿ

7

ಕುಡಿಯುವ ನೀರು ಸಮಸ್ಯೆ: ಸಹಾಯವಾಣಿ

Published:
Updated:

ಗುಬ್ಬಿ: ಕುಡಿಯುವ ನೀರು ಮತ್ತು ಉದ್ಯೋಗ ನೀಡುವ ಬಗ್ಗೆ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಬೇಕೆಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರಾಜು ತಿಳಿಸಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು,  ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರು ಹಾಗೂ ಉದ್ಯೋಗ ಸಂಬಂಧ ಯಾವುದೇ ಗಂಭೀರ ಸಮಸ್ಯೆ ಗಳಿದ್ದಲ್ಲಿ ಕೂಡಲೇ ಗ್ರಾ.ಪಂ. ನೋಡಲ್ ಅಧಿಕಾರಿಗಳು, ಕಾರ್ಯನಿರ್ವಹಣಾಧಿ ಕಾರಿ, ಎಇಇ ಗಮನಕ್ಕೆ ತಂದು ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು ಎಂದರು.ಗ್ರಾ.ಪಂ. ಸಿಬ್ಬಂದಿ ಕೆಲಸ ಮಾಡುವ ಕೇಂದ್ರ ಸ್ಥಾನದಲ್ಲಿದ್ದು ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಬೇಕು. ಈ ಸಂದರ್ಭದಲ್ಲಿ ಗ್ರಾ.ಪಂ. ಸಿಬ್ಬಂದಿಗೆ ರಜೆ ನೀಡಬಾರದು. ಕುಡಿಯುವ ನೀರಿನ ಸಮಸ್ಯೆ ಬಗ್ಗೆ  ತಾ.ಪಂ. ದೂರವಾಣಿ ಸಂಖ್ಯೆ 08131- 222237, ಎಂಜಿನಿಯರ್ 222246, ತಾಲ್ಲೂಕು ಕಚೇರಿ 222234 ಸಹಾವಾಣಿಗೆ ದಿನ ಪೂರ್ತಿ ಕರೆಮಾಡಬಹುದು.

 

ದೂರುಗ ಳನ್ನು ಗ್ರಾ.ಪಂ. 24 ಗಂಟೆಯೊಳಗೆ ದಾಖಲಿಸಿ. ತಾಲ್ಲೂಕು ದಂಡಾಧಿಕಾರಿಗ ಳಿಂದ ಪರಿಹಾರ ಕಂಡುಕೊಳ್ಳ ಬಹುದು. ಉದ್ಯೋಗ ಖಾತರಿ ಯೋಜನೆ ಮಾರ್ಗ ಸೂಚಿ ಹೊರತು ಪಡಿಸಿ ಕಾಮಗಾರಿ ಮಾಡಲು ಅವಕಾಶವಿಲ್ಲ ಎಂದರು.ಟಾಸ್ಕ್ ಫೊರ್ಸ್

ಮಧುಗಿರಿ: ಜಿಲ್ಲೆಯ 10 ತಾಲ್ಲೂಕು ಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದ್ದು, ಕುಡಿಯು ನೀರಿನ ವ್ಯವಸ್ಧೆ ಗಾಗಿ ಪ್ರತಿ ತಾಲ್ಲೂಕಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೊರ್ಸ್ ಸಮಿತಿ  ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಕೆ. ರಾಜು ತಿಳಿಸಿದರು.ಇಲ್ಲಿನ ಡಿಡಿಪಿಐ ಕಚೇರಿ ಸಭಾಂಗಣ ದಲ್ಲಿ ಗುರುವಾರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಈಗಾಗಲೇ ಜಿಲ್ಲೆಗೆ 64 ಕೋಟಿ ಹಣ ಬಿಡುಗಡೆಯಾಗಿದ್ದು, ತಾಲ್ಲೂಕಿಗೆ ರೂ. 3.93 ಕೋಟಿ ಐಎಂಐಎಸ್‌ನಿಂದ ಬಿಡುಗಡೆಯಾಗಿದೆ ಎಂದರು.ಶಿರಾ ತಾಲ್ಲೂಕಿನ ಗಂಡಿಹಳ್ಳಿ, ಪಾವಗಡ ತಾಲ್ಲೂಕಿನ ನಾಗಲಮಡಿಕೆ ಯಲ್ಲಿ ಗೋಶಾಲೆ ತೆರೆಯಲಾಗಿದೆ. ಮಧುಗಿರಿ ತಾಲ್ಲೂಕಿನಲ್ಲಿ ಮುಂದಿನ 6 ತಿಂಗಳು ಜಾನುವಾರುಗಳಿಗೆ ಮೇವಿನ ಸಮಸ್ಯೆ ಇಲ್ಲದ ಕಾರಣ ತಾಲ್ಲೂಕಿನಲ್ಲಿ ತಕ್ಷಣಕ್ಕೆ ಗೋಶಾಲೆ ತೆರೆಯುವ ಸಾಧ್ಯತೆ ಇಲ್ಲ ಎಂದರು.  ಉಪವಿಭಾಗಾಧಿಕಾರಿ ದೀಪ್ತಿದಿಲೀಪ್ ಮೆಹಂದಳೆ, ತಹಶೀಲ್ದಾರ್ ಆರ್. ನಾಗರಾಜಶೆಟ್ಟಿ, ಡಿವೈಎಸ್‌ಪಿ ಶೋಭಾ ರಾಣಿ ಹಾಜರಿದ್ದರು.ಅಧಿಕಾರಿಗಳಿಗೆ ಸೂಚನೆಪಾವಗಡ: ಜನರಿಗೆ ಕುಡಿಯುವ ನೀರು, ದನಕರುಗಳಿಗೆ ಮೇವು ಕೊರತೆಯಾಗ ದಂತೆ ನೋಡಿಕೊಳ್ಳುವುದು ತಾಲ್ಲೂಕು ಬರ ನಿರ್ವಹಣ ಸಮಿತಿ ಕರ್ತವ್ಯವೆಂದು ಜಿಲ್ಲಾಧಿಕಾರಿ ಆರ್.ಕೆ.ರಾಜು ತಿಳಿಸಿದ್ದಾರೆ. ತಾಲ್ಲೂಕಿನ ಎಲ್ಲ 33 ಗ್ರಾಮ ಪಂಚಾಯಿತಿಗಳಲ್ಲಿ ಗೋಶಾಲೆ ಬೇಕು ಎಂದು ಚುನಾಯಿತ ಪ್ರತಿನಿಧಿಗಳು ತಿಳಿಸಿದ್ದಾರೆ. ಅಗತ್ಯವಾದಲ್ಲಿ ಗೋಶಾಲೆ ಪ್ರಾರಂಭಿಸುತ್ತೇವೆ. ಕುಡಿಯುವ ನೀರು , ಮೇವು ತರಿಸಲು ಹಣದ ಕೊರತೆ ಇಲ್ಲ. ಕೂಡಲೇ ಕೆಲಸ ಪ್ರಾರಂಭಿಸಿ ಎಂದು ಆಧಿಕಾರಿಗಳಿಗೆ ಸೂಚಿಸಿದರು.ಯಾವುದೇ ಹಳ್ಳಿಯಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ದೂರು ಬರದ ಹಾಗೆ ನೋಡಿಕೊಳ್ಳ ಬೇಕು. ಶುದ್ದ ಕುಡಿಯುವ ನೀರು ನೀಡುವ ಕರ್ತವ್ಯ ಗ್ರಾಮ ಪಂಚಾಯಿತಿ ಗಿದೆ. ಟ್ಯಾಂಕರ್ ಮೂಲಕ ನೀರು ನೀಡಬೇಕು ಎಂದು ತಿಳಿಸಿದ್ದಾರೆ.ಪಾವಗಡದಲ್ಲಿ 25 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ ಜನರ ಗೋಳು ತೀರದಾಗಿದೆ ಎಂದು ರೈತಸಂಘದ ನರಸಿಂಹರೆಡ್ಡಿ ದೂರು ನೀಡಿದರು. ಪರಿಶೀಲನೆ ಮಾಡಿ ಅಗತ್ಯ ಕ್ರಮಕೈಗೊ ಳ್ಳುವಂತೆ ಪ.ಪಂ. ಮುಖ್ಯಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿನೋದಮ್ಮ ರಾಮಾಂಜಿನಪ್ಪ, ತಹಶೀಲ್ದಾರ್ ಜಿ.ಎಸ್.ಪ್ರಸನ್ನಕುಮಾ ರ್, ಇ.ಒ. ರಂಗನಾಥ್, ಆಶೋಕ್‌ರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಶ್ರಿಧರ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry