ಸೋಮವಾರ, ಅಕ್ಟೋಬರ್ 21, 2019
25 °C

ಕುಡಿಯೋ ನೀರಿಗೆ ಕುತ್ತು ತಂದ ಮರಳು ಗಣಿಗಾರಿಕೆ

Published:
Updated:

ಮೂಡಿಗೆರೆ (ಚಿಕ್ಕಮಗಳೂರು): ಹೇಮಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಪರಿಣಾಮ ಗೋಣಿಬೀಡು ಹೋಬಳಿ ಕೇಂದ್ರದ ಸುಮಾರು ಮೂರು ಸಾವಿರ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾ ಗಿದೆ. ತಕ್ಷಣವೇ ಮರಳು ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಗೋಣಿಬೀಡು ಗ್ರಾ.ಪಂ. ಚುನಾಹಿತ ಪ್ರತಿನಿಧಿಗಳು ಮತ್ತು ಸ್ಥಳೀಯರು ಜಿಲ್ಲಾಡಳಿತ ಒತ್ತಾಯಿಸಿದ್ದಾರೆ.ಗ್ರಾ.ಪಂ. ಅಧ್ಯಕ್ಷೆ ಮಮತಾ ನೇತೃತ್ವದ ಸ್ಥಳೀಯರ ತಂಡವು ಗುರುವಾರ ಹೊರಟ್ಟಿ ಬಳಿ ಹೇಮಾವತಿ ನದಿ ಪಾತ್ರಕ್ಕೆ ಭೇಟಿ ನೀಡಿ, ಮರಳು ಗಣಿಗಾರಿಕೆಯಿಂದ ಆಗುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿ ದರು.ಜಿ.ಅಗ್ರಹಾರ ಸಮೀಪದ ಹೊರಟ್ಟಿ ಬಳಿಯ ಹೇಮಾವತಿ ನದಿಯಿಂದ ಕುಡಿಯುವ ನೀರನ್ನು ಮೂರು ಕಿ.ಮೀ.ವರೆಗೆ ಕೊಳವೆ ಮೂಲಕ ಸಾಗಿಸಿ, ಗೋಣಿಬೀಡು ಹೋಬಳಿ ಕೇಂದ್ರಕ್ಕೆ ಸರಬರಾಜು ಮಾಡಲಾಗುತ್ತಿದೆ.ಅಕ್ರಮ ಮರಳು ಗಣಿಗಾರಿಕೆ ಪರಿಣಾಮ ನದಿಯಲ್ಲಿ ಸುಮಾರು ಹತ್ತು ಅಡಿ ಆಳಕ್ಕೆ ನೀರು ಬತ್ತಿದೆ. ಕೊಳವೆಯು ನೀರಿಗಿಂತ ಮೇಲೆ ಕಾಣಿಸುತ್ತಿದ್ದು, ಅಕ್ಕಪಕ್ಕದ ಬಾವಿಗಳು ಕೂಡ ನೀರಿಲ್ಲದೆ ಬತ್ತಿ ಹೋಗಿದೆ ಎಂದು ಆರೋಪಿಸಿದ್ದಾರೆ. ಬೇಸಿಗೆ ಆರಂಭಕ್ಕೂ ಮೊದಲೇ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಆತಂಕವಿದೆ. ಸಮಸ್ಯೆ ಪರಿಹಾರಕ್ಕೆ ತಕ್ಷಣ 50 ಲಕ್ಷ ರೂ. ಅನುದಾನ ಒದಗಿಸುವಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಗ್ರಾ.ಪಂ.ಅಧ್ಯಕ್ಷೆ ಮಮತಾ ತಿಳಿಸಿದ್ದಾರೆ.ತಾ.ಪಂ.ಸದಸ್ಯೆ ಸುಮಾ ಸುರೇಶ್, ಉಪಾಧ್ಯಕ್ಷ ಜಿ.ಎಸ್.ದೀನೇಶ್, ಸದಸ್ಯ ರಾದ ಸುದೀಪ್, ಸುಧೀರ್, ಮುಖಂ ಡರಾದ ಆದರ್ಶ, ವೆಂಕಟೇಶ್ ಆಚಾರ್, ಕಿರುಗುಂದ ಅಬ್ಬಾಸ್, ಬಸವರಾಜ್, ಮರಬೈಲ್ ರತನ್ ಇನ್ನಿತರರು ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)