ಗುರುವಾರ , ಏಪ್ರಿಲ್ 15, 2021
24 °C

ಕುಡಿವ ನೀರು ಯೋಜನೆಗೆ ವಂತಿಗೆ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ರಾಜ್ಯ ಸರ್ಕಾರ ವಿಶ್ವಬ್ಯಾಂಕ್ ಸಾಲದ ನೆರವಿನ ಯೋಜನೆಯಲ್ಲಿ ಬಹು ಹಳ್ಳಿಗಳ ಕುಡಿಯುವ ನೀರಿನ ಯೋಜನೆಗಾಗಿ ಗೌರ(ಬಿ) ಗ್ರಾ.ಪಂ. ಸದಸ್ಯರು ಭಾನುವಾರ ಅಳ್ಳಗಿ(ಕೆ)ಯಲ್ಲಿ ಗ್ರಾಮಸ್ಥರಿಂದ ಮನೆ ಮನೆಗೆ ತೆರಳಿ ವಂತಿಗೆ ಹಣವನ್ನು ಸಂಗ್ರಹ ಮಾಡಿದರು.ಸುಮಾರು ರೂ.5 ಕೋಟಿ  ವಿಶ್ವ ಬ್ಯಾಂಕ್ ನೆರವಿನ ಯೋಜನೆ ಅಡಿಯಲ್ಲಿ ಬಳೂಂಡಗಿ, ಬಳೂರ್ಗಿ, ಶಿರವಾಳ, ಗೌರ(ಬಿ), ನಂದರ್ಗಿ ಹೀಗೆ ಸುಮಾರು 7 ಗ್ರಾಮಗಳನ್ನು ಬಹು ಹಳ್ಳಿಗಳ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಆಯ್ಕೆ ಮಾಡಿಕೊಂಡು ಭೀಮಾ ನದಿಯಿಂದ ಈ ಗ್ರಾಮಗಳಿಗೆ ಶಾಸ್ವತ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಅದಕ್ಕಾಗಿ ಈ ಯೋಜನೆಯ ಒಟ್ಟು ಹಣದ ಶೇ.10 ರಷ್ಟು ಯೋಜನೆ ವ್ಯಾಪ್ತಿಗೆ ಒಳಪಡುವ ಏಳು ಗ್ರಾಮಗಳು ವಂತಿಗೆ ಹಣ ನೀಡಬೇಕಾಗುತ್ತದೆಂದು ನಿಕೇತನ ಸಂಸ್ಥೆಯ ಅಧಿಕಾರಿ ಸುಬ್ರಮಣ್ಯಂ ತಿಳಿಸಿದರು.ಗ್ರಾ.ಪಂ. ಅಧ್ಯಕ್ಷೆ ಸಿದ್ದಮ್ಮ ನಾಮದೇವ ಹಾಗೂ ಸದಸ್ಯ ಅಶೋಕ ಕಲ್ಲೂರ ಮಾತನಾಡಿ ಈ ಯೋಜನೆಗೆ ವಂತಿಗೆ ಹಣವನ್ನು ಕೇವಲ ಗ್ರಾಮಸ್ಥರಿಂದ ಸಂಗ್ರಹ ಮಾಡುವುದು ಕಷ್ಟಕರವಾಗುತ್ತದೆ ಜನ ಪ್ರತಿನಿಧಿಗಳು ವಂತಿಗೆ ಹಣವನ್ನು ನೀಡಬೇಕು ಅಂದರೆ ಈ ಯೋಜನೆ ಯಶಸ್ವಿಯಾಗುತ್ತದೆ. ವಂತಿಗೆ ಹಣ ಗ್ರಾಮಸ್ಥರಿಗೆ ಭಾರವಾಗುತ್ತದೆ ಎಂದು ಅವರು ತಿಳಿಸಿದರು. ಗ್ರಾ.ಪಂ. ಸದಸ್ಯ ಅಶೋಕ ಕಲ್ಲೂರ, ಇಮಾಂಸಾಬ್ ಮತ್ತಿತರರು ಭಾಗವಹಿಸಿದ್ದರು.  ಹಾಗೂ ಗ್ರಾಮ ನೀರು ಸರಬರಾಜ ನೈರ್ಮಲ್ಯ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.