ಕುಡುಕನ ಕುಣಿತ

7

ಕುಡುಕನ ಕುಣಿತ

Published:
Updated:

ಚೀನಾದಲ್ಲಿ 26 ವರ್ಷ ವಯಸ್ಸಿನ ಕುಡುಕನೊಬ್ಬನ ಕಾರಣಕ್ಕೆ ಡೊಂಗುವಾನ್ ನಗರದಲ್ಲಿ ಇತ್ತೀಚೆಗೆ ನಾಲ್ಕು ತಾಸು ಸತತವಾಗಿ ವಿದ್ಯುತ್ ಕಡಿತಗೊಳಿಸಬೇಕಾಯಿತು. ಪಾನಮತ್ತನಾಗಿದ್ದ ಅವನು ನಗರದ ಪ್ರಮುಖ ಹೈವೋಲ್ಟೇಜ್ ಕಂಬದ ಮೇಲೇರಿ, ವಿದ್ಯುತ್ ತಂತಿಗಳ ಮೇಲೆ ಕಾಲಿಟ್ಟು ಕುಣಿಯತೊಡಗಿದನಂತೆ. ಬೂಟು ತೊಟ್ಟಿದ್ದರಿಂದ ಅವನಿಗೆ ವಿದ್ಯುತ್ ಶಾಕ್ ಉಂಟಾಗಲಿಲ್ಲ. ಅವನ ಪ್ರಾಣ ಉಳಿಸಲೆಂದು ವಿದ್ಯುತ್ ಕಡಿತಗೊಳಿಸಲಾಯಿತು. ಎಲ್ಲರೂ ಬುದ್ಧಿ ಖರ್ಚು ಮಾಡಿ, ಅವನ ಕುಣಿತ ನಿಲ್ಲಿಸಿ, ಕಂಬದಿಂದ ಕೆಳಗಿಳಿಸಲು ನಾಲ್ಕು ತಾಸು ಬೇಕಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry