ಕುಡುಕ ಚಾಲಕನಿಗೆ ದೇವಸ್ಥಾನದ ಸೇವೆಯ ಶಿಕ್ಷೆ

7

ಕುಡುಕ ಚಾಲಕನಿಗೆ ದೇವಸ್ಥಾನದ ಸೇವೆಯ ಶಿಕ್ಷೆ

Published:
Updated:

ನವದೆಹಲಿ (ಪಿಟಿಐ): ಮದ್ಯಪಾನ ಸೇವಿಸಿ ಚಾಲನೆ ಮಾಡಿದ ಯುವಕನೊಬ್ಬನಿಗೆ ಶಿಕ್ಷೆ ರೂಪದಲ್ಲಿ 2 ತಿಂಗಳ ಕಾಲ ದೇವಸ್ಥಾನದಲ್ಲಿ ಸಮುದಾಯ ಸೇವೆ  ಮಾಡಬೇಕೆಂದು ಇಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿದೆ.ಇಲ್ಲಿನ ಹೆಚ್ಚುವರಿ ಸೆಷನ್ ನ್ಯಾಯಾಧೀಶ ವೀರೇದ್ರ ಭಟ್ ಈ ತೀರ್ಪು ನೀಡಿದ್ದು, ಜೈಲು ಶಿಕ್ಷೆಯ ಬದಲು ಸಮುದಾಯ ಸೇವೆಯಲ್ಲಿ ತೊಡಗುವಂತೆ ಯುವಕನಿಗೆ ಆದೇಶಿಸಲಾಗಿದೆ. `ಪ್ರದೀಪ್ ಅವಿವಾಹಿತನಾಗಿದ್ದು, ವಯಸ್ಸಾದ ಪೋಷಕರನ್ನು ಹೊಂದಿದ್ದಾನೆ.ಯುವಕನಿಗೆ ಜೈಲುಶಿಕ್ಷೆ ವಿಧಿಸಿದರೆ ಭವಿಷ್ಯದಲ್ಲಿ ಕಪ್ಪುಚುಕ್ಕೆಯಾಗುತ್ತದೆ, ಕುಟುಂಬದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಈ ತೀರ್ಪು ನೀಡಲಾಗಿದೆ~ ಎಂದು ಕೋರ್ಟ್ ಹೇಳಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry