ಸೋಮವಾರ, ಜೂನ್ 14, 2021
28 °C

ಕುಣಿಗಲ್‌: ಶಾಸಕ–ಸಂಸದರ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್‌: ಪಟ್ಟಣದ ಪುರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ಮಾರ್ಚ್ 24 ರಂದು ನಡೆಯಲಿದೆ. ಜೆಡಿಎಸ್‌ನ ಕೆಲ ಸದಸ್ಯರು ಕಾಂಗ್ರೆಸ್ ಪಾಳೆಯದಲ್ಲಿ ಗುರುತಿಸಿಕೊಂಡಿ­ರು­ವುದರಿಂದ ಚುನಾವಣೆ, ತಿರುವು ಪಡೆದಿದೆ. ಶಾಸಕರು ಪ್ರಭಾವಿಯೋ, ಸಂಸದರ ಕೈ ಮೇಲಾಗುವುದೋ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್ 7, ಕಾಂಗ್ರೆಸ್ 7, ಬಿಜೆಪಿ 1, ಬಂಡಾಯ ಜೆಡಿಎಸ್ 7, ಪಕ್ಷೇತರರು ಒಬ್ಬರಿದ್ದಾರೆ. ಶುಕ್ರವಾರದ ತನಕ ಜೆಡಿಎಸ್ ಒಗ್ಗಟ್ಟಿನ ಮಂತ್ರ ಜಪಿಸಿ ಅಧಿಕಾರ ಹಿಡಿಯುವುದನ್ನು ಖಚಿತ ಪಡಿಸಿಕೊಂಡಿತ್ತು. ಆದರೆ ಶನಿವಾರ ನಡೆದ ನಾಟಕೀಯ ಬೆಳವಣಿಗೆಯಿಂದ ಜೆಡಿಎಸ್‌ನ ಮೂವರು, ಬಿಜೆಪಿಯ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.ದಿಢೀರ್‌ ಬೆಳವಣಿಗೆಯಿಂದ ಎಚ್ಚೆತ್ತ ಜೆಡಿಎಸ್ ಸದಸ್ಯರು ಉಳಿದ ಸದಸ್ಯರ ಜತೆ ಒಂದಾಗಿ ಶಾಸಕರ ಆಸರೆಯಲ್ಲಿದ್ದಾರೆ. ಒಟ್ಟಾರೆ ಚುನಾವಣೆ ಕ್ಷಣ ಕ್ಷಣಕ್ಕೂ ರಂಗು ಪಡೆಯುತ್ತಿದೆ.ಜೆಡಿಎಸ್‌ನಿಂದ ಕೆ.ಎಲ್.ಹರೀಶ್, ಈ.ಮಂಜು ಪ್ರಬಲ ಆಕಾಂಕ್ಷಿಗಳಾಗಿದ್ದರೆ, ಕಾಂಗ್ರೆಸ್–ಜೆಡಿಎಸ್ ಮೈತ್ರಿ ಕೂಟದಿಂದ ಚಂದ್ರಶೇಖರ್, ರಂಗಸ್ವಾಮಿ, ಪಾಪಣ್ಣ ಅಧ್ಯಕ್ಷರಾಗಲು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.