ಕುಣಿಗಲ್ ಬಳಿ ಟ್ಯಾಂಕರ್ ಅಪಘಾತ: ಇಬ್ಬರ ಸಾವು

ಶನಿವಾರ, ಜೂಲೈ 20, 2019
27 °C

ಕುಣಿಗಲ್ ಬಳಿ ಟ್ಯಾಂಕರ್ ಅಪಘಾತ: ಇಬ್ಬರ ಸಾವು

Published:
Updated:

ಕುಣಿಗಲ್: ಕೆಟ್ಟು ನಿಂತಿದ್ದ ಹಾಲಿನ ಟ್ಯಾಂಕರ್‌ಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-48ರ ಬೈಪಾಸ್ ರಸ್ತೆಯ ಹನುಮಾಪುರ- ಶೆಟ್ಟಿಗೆಹಳ್ಳಿ ಗ್ರಾಮದ ಬಳಿ ಸೋಮವಾರ ಸಂಭವಿಸಿದೆ.ಗ್ಯಾಸ್ ಟ್ಯಾಂಕರ್  ಚಾಲಕ,  ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೆಲ್ವಕುಮಾರ್ ಕ್ಯಾಬಿನ್‌ನಲ್ಲೇ ಸುಟ್ಟು ಕರಕಲಾಗಿದ್ದಾರೆ. ಇನ್ನೊಬ್ಬ ಮೃತನನ್ನು ಹಾಲಿನ ಟ್ಯಾಂಕರ್‌ನಲ್ಲಿದ್ದ ಮಹಾರಾಷ್ಟ್ರದ ಸೋಲಾಪುರದ ಸುರೇಶ್ ಎಂದು ಗುರುತಿಸಲಾಗಿದೆ. ಇವರು ತನ್ನ ಸಹೋದರ ಚಂದ್ರಕಾಂತ್‌ನೊಂದಿಗೆ ಚನ್ನರಾಯಪಟ್ಟಣದಲ್ಲಿ ಹಾಲು ಸಂಗ್ರಹಿಸಿ ಬೆಂಗಳೂರಿಗೆ ಹೊರಟಿದ್ದರು.ಹನುಮಾಪುರ ಗ್ರಾಮದ ಬಳಿ ಲಾರಿ ಕೆಟ್ಟುಹೋಗಿದ್ದರಿಂದ ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಮಂಗಳೂರು ಕಡೆಯಿಂದ ಬಂದ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆಯಿತು. ಡಿಕ್ಕಿ ರಭಸಕ್ಕೆ ಮುಖ್ಯರಸ್ತೆ ಬದಿಯಲ್ಲಿದ್ದ  ವಾಹನಗಳು ಸೇವಾ ರಸ್ತೆಗೆ ಉರುಳಿ ಬಿದ್ದು, ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡು ಕ್ಯಾಬಿನ್‌ಗಳು ಸುಟ್ಟು ಭಸ್ಮವಾದವು.ಗ್ಯಾಸ್ ಟ್ಯಾಂಕರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ರಾಷ್ಟ್ರೀಯ ಹೆದ್ದಾರಿಯ ಸುಮಾರು ಒಂದು ಕಿ.ಮೀ. ಅಂತರದಲ್ಲಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಯಿತು. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.ಗ್ಯಾಸ್ ಟ್ಯಾಂಕರ್‌ನ ಕ್ಯಾಬಿನ್‌ಗಳಿಗೆ ಮಾತ್ರ ಬೆಂಕಿ ತಗುಲಿದ್ದು, ಗ್ಯಾಸ್ ತುಂಬಿರುವ ಟ್ಯಾಂಕ್ ಸುರಕ್ಷಿತವಾಗಿದೆ ಎಂಬ ವಿಚಾರ ತಿಳಿದ ನಂತರ ಗ್ರಾಮಸ್ಥರು ಮತ್ತು ಅಧಿಕಾರಿಗಳು ನಿಟ್ಟುಸಿರುಬಿಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry