ಕುಣಿಗಲ್ ರಸ್ತೆ ತುಂಬಾ ಕಸ

7

ಕುಣಿಗಲ್ ರಸ್ತೆ ತುಂಬಾ ಕಸ

Published:
Updated:
ಕುಣಿಗಲ್ ರಸ್ತೆ ತುಂಬಾ ಕಸ

ಕುಣಿಗಲ್: ಪಟ್ಟಣದಲ್ಲಿ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದ್ದು ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.ಪುರಸಭೆ ವ್ಯಾಪ್ತಿಯ 10ನೇ ವಾರ್ಡ್, ಗುಜ್ಜಾರಿಮೊಹಲ್ಲ, ಚೌಡೇಶ್ವರಿ ಬೀದಿ, ಚಿಕ್ಕಕೆರೆ ಪ್ರದೇಶ, ಕೋಟೆ, ಸಂತೆ ಮೈದಾನ, ಬ್ಯಾಂಕ್ ಕಾಲೋನಿ ಪ್ರದೇಶಗಳು ಸೇರಿದಂತೆ ಇತರ ಕಡೆಗಳಲ್ಲಿ ಕಸ ವಿಲೇವಾರಿ ಮಾಡದ ಕಾರಣ ರಸ್ತೆ ತುಂಬೆಲ್ಲ ಕಸ ಹರಡಿ ದುರ್ನಾತ ಬೀರುತ್ತಿರುತ್ತದೆ.  ಕಸ ವಿಲೇವಾರಿಗಾಗಿ ಪುರಸಭೆಯ ಕಾಯಂ ನೌಕರರು ಸೇರಿದಂತೆ ಟೆಂಡರ್ ಮೂಲಕವು ಗುತ್ತಿಗೆಯನ್ನು ನೀಡಲಾಗಿದ್ದು, ಗುತ್ತಿಗೆದಾರರಿಗೆ ಪ್ರತಿ ತಿಂಗಳು 2ಲಕ್ಚಕ್ಕೂ ಹೆಚ್ಚು ಹಣವನ್ನು ಕಸ ವಿಲೇವಾರಿಗಾಗಿ ನೀಡಲಾಗುತ್ತಿದೆ. ಆದರೂ, ಕಸ ವಿಲೇವಾರಿಯ ನಿರ್ವಹಣೆಯಲ್ಲಿನ ಲೋಪ ದೋಷಗಳಿಂದಾಗಿ ಸಮಸ್ಯೆ ಹೆಚ್ಚಾಗಿದೆ. ಗುತ್ತಿಗೆದಾರರು ಷರತ್ತುಗಳಿಗೆ ಬದ್ಧರಾಗಿ ನೌಕರರನ್ನು ನೇಮಿಸಿಕೊಂಡು ಕಸ ಸಂಗ್ರಹಿ ವಿಲೇವಾರಿ ಮಾಡುವಲ್ಲಿ ವಿಫಲರಾಗಿದ್ದು, ಪುರಸಭೆ ಮುಖ್ಯಾಧಿಕಾರಿ ಮತ್ತು ಪರಿಸರ ಎಂಜಿನಿಯರ್ ಅವರು ಜಾಣ ಕುರುಡರಾಗಿದ್ದಾರೆ ಎಂದು ಸಾರ್ವಜನಿರು ದೂರಿದರು.ಪುರಸಭೆ ಸದಸ್ಯರು ಸಾಮಾನ್ಯಸಭೆಯಲ್ಲಿ ಈ ಕುರಿತು ಚಕಾರ ಎತ್ತುತ್ತಾರೆ ವಿನಃ ಯಾರೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಶ್ರಯ ಸಮಿತಿ ಸದಸ್ಯ ವೆಂಕಟೇಶ್ ಆರೋಪಿಸಿದರು. ಪುರಸಭೆಯ ನಿರ್ಲಕ್ಷ್ಯದಿಂದಾಗಿ ಪಟ್ಟಣದಲ್ಲಿ ಕಸ ಹೆಚ್ಚಾಗಿ ಸೊಳ್ಳೆ ಕಾಟ ಜಾಸ್ತಿಯಾಗುತ್ತಿದ್ದು, ಈಗ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾದ್ಯತೆ ಇದೆ. ಇನ್ನಾದರೂ ಎಚ್ಚೆತ್ತು ನೈರ್ಮಲ್ಯವನ್ನು ಕಾಪಾಡಬೇಕೆಂದು ವಿಶಾಲಾಕ್ಷ್ಮ ಆಗ್ರಹಿಸಿದರು. ಈ ಹಿಂದೆ ಬೇಸಿಗೆ ಕಾಲ ಪ್ರಾರಂಭವಾಗುವ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಿ ಡಿಡಿಟಿ ಪೌಡರ್, ಫಿನಾಯಿಲ್, ಫಾಗಿಂಗ್ ಮಾಡಲಾಗುತ್ತಿತ್ತು. ಆದರೆ, ಈಗ ಎಲ್ಲವೂ ಮಾಯವಾಗಿದ್ದು, ಖರೀದಿಸುತ್ತಿರುವ ಡಿಡಿಟಿ ಪೌಡರ್, ಫಿನಾಯಿಲ್‌ಗಳು ಏಲ್ಲಿ ಮಾಯವಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಎಂದು ಕೆ.ಎಚ್.ರಮೇಶ್ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry