ಶನಿವಾರ, ಮೇ 28, 2022
24 °C

ಕುತೂಹಲಕಾರಿ ಘಟ್ಟದಲ್ಲಿ ಪಂದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಜ್‌ಟೌನ್ (ಪಿಟಿಐ): ಭಾರತ `ಎ~ ಮತ್ತು ವೆಸ್ಟ್ ಇಂಡೀಸ್ `ಎ~ ತಂಡಗಳ ನಡುವಿನ ನಾಲ್ಕು ದಿನಗಳ ಟೆಸ್ಟ್ ಪಂದ್ಯ ರೋಚಕ ಅಂತ್ಯ ಕಾಣುವ ಸಾಧ್ಯತೆಯಿದೆ. ಗೆಲುವಿಗೆ 186 ರನ್‌ಗಳ ಗುರಿ ಪಡೆದಿರುವ ಭಾರತ `ಎ~ ತಂಡ ಆರಂಭಿಕ ಆಘಾತಕ್ಕೆ ಒಳಗಾಗಿದೆ.ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಮೂರನೇ ದಿನವಾದ ಸೋಮವಾರದ ಆಟದ ಅಂತ್ಯಕ್ಕೆ ಪ್ರವಾಸಿ ತಂಡ 10 ಓವರ್‌ಗಳಲ್ಲಿ 3 ವಿಕೆಟ್‌ಗೆ 22 ರನ್ ಗಳಿಸಿತ್ತು. ಇದೀಗ ಅಂತಿಮ ದಿನ ಇನ್ನುಳಿದ ಏಳು ವಿಕೆಟ್‌ಗಳಿಂದ 164 ರನ್ ಗಳಿಸುವ ಗುರಿ ಭಾರತದ ಮುಂದಿದೆ.ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್ `ಎ~: ಮೊದಲ ಇನಿಂಗ್ಸ್ 87.3 ಓವರ್‌ಗಳಲ್ಲಿ 252 ಮತ್ತು ಎರಡನೇ ಇನಿಂಗ್ಸ್ 78.3 ಓವರ್‌ಗಳಲ್ಲಿ 210 (ಲೆಂಡ್ಲ್ ಸಿಮಾನ್ಸ್ 53, ಕ್ರೆಗ್ ಬ್ರಾಥ್‌ವೈಟ್ 50, ಡೆವೊನ್ ಥಾಮಸ್ 22, ರೋಹಿತ್ ಶರ್ಮ 41ಕ್ಕೆ 4, ಭುವನೇಶ್ವರ್ ಕುಮಾರ್ 44ಕ್ಕೆ 3, ಶಮಿ ಅಹ್ಮದ್ 24ಕ್ಕೆ 2, ರಾಹುಲ್ ಶರ್ಮ 67ಕ್ಕೆ 1). ಭಾರತ `ಎ~: ಮೊದಲ ಇನಿಂಗ್ಸ್: 81.1 ಓವರ್‌ಗಳಲ್ಲಿ 277 ಮತ್ತು ಎರಡನೇ ಇನಿಂಗ್ಸ್ 10 ಓವರ್‌ಗಳಲ್ಲಿ 3 ವಿಕೆಟ್‌ಗೆ 22 (ಅಜಿಂಕ್ಯ ರಹಾನೆ 5, ಶಿಖರ್ ಧವನ್ ಬ್ಯಾಟಿಂಗ್ 13, ಜೇಸನ್ ಹೋಲ್ಡರ್ 12ಕ್ಕೆ 2).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.