ಕುತೂಹಲ ಮೂಡಿಸಿದ ದಿಗ್ವಿಜಯ್–ನಿಲೇಕಣಿ ಭೇಟಿ

7

ಕುತೂಹಲ ಮೂಡಿಸಿದ ದಿಗ್ವಿಜಯ್–ನಿಲೇಕಣಿ ಭೇಟಿ

Published:
Updated:

ಬೆಂಗಳೂರು: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಆಧಾರ್‌) ಅಧ್ಯಕ್ಷ ನಂದನ್‌ ನಿಲೇಕಣಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಭಾನುವಾರ ಇಲ್ಲಿ ಭೇಟಿ ಮಾಡಿದರು.ಅವರು ನಡೆಸಿದ ಚರ್ಚೆಯ ವಿವರ ಲಭ್ಯವಾಗಿಲ್ಲ. ಆದರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯಲು ನಿಲೇಕಣಿ ಆಸಕ್ತಿ ತೋರಿ, ತಮ್ಮನ್ನು ಸಂಪರ್ಕಿಸಿರುವುದು ನಿಜ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಇತ್ತೀಚೆಗೆ ಸುದ್ದಿಗಾರರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದಿಗ್ವಿಜಯ್ ಮತ್ತು ನಿಲೇಕಣಿ ಭೇಟಿ ಮಹತ್ವ ಪಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry