ಭಾನುವಾರ, ಜನವರಿ 19, 2020
23 °C

ಕುತೂಹಲ ಮೂಡಿಸಿದ ಶಿವಪ್ರಭು- ಗುತ್ತೇದಾರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ರಭು ಪಾಟೀಲ ಅವರು ಜೆಡಿಎಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಹಾಗೂ ಶಾಸಕ ಸುಭಾಷ ಗುತ್ತೇದಾರ ಅವರನ್ನು ಸೋಮವಾರ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.ಜೆಡಿಎಸ್‌ನ ಮೂವರು ಸದಸ್ಯರ ಬೆಂಬಲದೊಂದಿಗೆ ಶಿವಪ್ರಭು ಪಾಟೀಲ ಜಿಲ್ಲಾ ಪಂಚಾಯಿತಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಇನ್ನೊಬ್ಬ ಸದಸ್ಯರೊಂದಿಗೆ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ವಾಪಸ್ ತೆಗೆದುಕೊಂಡಿದ್ದರು. ಇದರಿಂದಾಗಿ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತದ ಕೊರತೆ ಕಾಡುತ್ತಿತ್ತು.  ಶಿವಪ್ರಭು ಅವರು ಗುತ್ತೇದಾರ ಅವರನ್ನು ಭೇಟಿ ಮಾಡಿರುವುದು ಜೆಡಿಎಸ್‌ನ ಇಬ್ಬರು ಸದಸ್ಯರ ಬೆಂಬಲ ಪಡೆಯುವ ಉದ್ದೇಶದಿಂದಲೇ ಎಂದು ವಿಶ್ಲೇಷಿಸಲಾಗುತ್ತಿದೆ.`ನಾನು ಗುತ್ತೇದಾರರನ್ನು ಭೇಟಿ ಮಾಡಿದ್ದು, ಅನೌಪಚಾರಿಕ ಅಷ್ಟೆ! ಅವರು ಜೆಡಿಎಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಶುಭ ಕೋರಲು ಇಂದು ಅವರ ಮನೆಗೆ ತೆರಳಿ ಭೇಟಿ ಮಾಡಿದೆ~ ಎಂದು ಶಿವಪ್ರಭು ಪಾಟೀಲ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)