ಗುರುವಾರ , ನವೆಂಬರ್ 21, 2019
27 °C

`ಕುದುರೆಮುಖ'ದಲ್ಲಿ ಪರಿಸರ ಪ್ರವಾಸೋದ್ಯಮ

Published:
Updated:

ನವದೆಹಲಿ (ಪಿಟಿಐ): ಏಳು ವರ್ಷಗಳಿಂದ ಗಣಿಗಾರಿಕೆ ನಿಲ್ಲಿಸಿರುವ ಕುದುರೆಮುಖದಲ್ಲಿ ಇನ್ನು ಮುಂದೆ `ಪರಿಸರ ಪ್ರಿಯ' ಪ್ರವಾಸಿ ಚಟುವಟಿಕೆಗಳು ಗರಿಗೆದರಲಿವೆ...!ಗಣಿಗಾರಿಕೆ ನಡೆಯುತ್ತಿದ್ದ ಕುದುರೆಮುಖ ಪ್ರದೇಶಗಳಲ್ಲೇ  ಇಂಥ `ಪರಿಸರ ಪೂರಕ' ಚಟುವಟಿಕೆ ಕೈಗೊಳ್ಳಲು ಕುದುರೆಮುಖ ಕಬ್ಬಿಣ ಮತ್ತು ಉಕ್ಕು ಕಂಪೆನಿ (ಕೆಐಒಸಿಎಲ್) ಮುಂದಾಗಿದೆ.ರೂ. 805 ಕೋಟಿ ಬಂಡವಾಳ ಹೂಡಿಕೆಯೊಂದಿಗೆ  ಕುದುರೆಮುಖ ಪಟ್ಟಣವನ್ನು `ಪರಿಸರ ಪಟ್ಟಣ'ವನ್ನಾಗಿಸಲು ಕೆಒಐಸಿಎಲ್ ಹೆಜ್ಜೆ ಇಟ್ಟಿದೆ.`ಗಣಿಗಾರಿಕೆ ಪ್ರದೇಶದಲ್ಲಿರುವ ಮೂಲಸೌಲಭ್ಯಗಳನ್ನೇ ಬಳಸಿಕೊಂಡು ಪರಿಸರ ಪ್ರವಾಸೋದ್ಯಮದಂತಹ ಹೊಸ ಉದ್ದಿಮೆ ಆರಂಭಿಸುವ ಪ್ರಸ್ತಾವನೆ ಸಿದ್ಧಪಡಿಸಿರುವುದಾಗಿ' ಕೆಐಒಸಿಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಲಯ್ ಚಟರ್ಜಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.`ಕುದುರೆ ಮುಖದಲ್ಲಿ ಅನುಷ್ಠಾನಗೊಳಿಸುವ ಪರಿಸರ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ವಿವರವಾದ ಯೋಜನಾ ವರದಿ ಸಿದ್ಧವಾಗಿದೆ. ಕರ್ನಾಟಕ ಸರ್ಕಾರದಿಂದ ಯೋಜನೆಗೆ ತಾತ್ವಿಕ ಅನುಮೋದನೆ ದೊರೆತಿದೆ' ಎಂದು ಚಟರ್ಜಿ ವಿವರಿಸಿದ್ದಾರೆ.ಕುದುರೆಮುಖ ವ್ಯಾಪ್ತಿಯ 1622 ಎಕರೆ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆ ಅನುಷ್ಠಾನಕ್ಕೆ ಚಿಂತನೆ ನಡೆಸಿದೆ. ಈ ಪ್ರದೇಶವನ್ನು 99 ವರ್ಷ ಗುತ್ತಿಗೆ ತೆಗೆದುಕೊಳ್ಳಲು ಅನುಮೋದನೆ ನೀಡುವಂತೆ ಕರ್ನಾಟಕ ಸರ್ಕಾರವನ್ನೂ ಕಂಪೆನಿ ಕೇಳಿದೆ. ಈ ಯೋಜನೆಯಿಂದ ಉದ್ಯೋಗ ಸೃಷ್ಟಿಯಾಗುವ ಜೊತೆಗೆ ಸರ್ಕಾರಕ್ಕೆ ಆದಾಯ ಲಭ್ಯವಾಗುತ್ತದೆ.

ಪ್ರತಿಕ್ರಿಯಿಸಿ (+)