ಕುದ್ರೋಳಿಯಲ್ಲಿ ವಿಶಿಷ್ಟ ಪೂಜೆ

7

ಕುದ್ರೋಳಿಯಲ್ಲಿ ವಿಶಿಷ್ಟ ಪೂಜೆ

Published:
Updated:

ಮಂಗಳೂರು (ಕುದ್ರೋಳಿ): ಇಲ್ಲಿನ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಇಂದು ಹಮ್ಮಿಕೊಂಡಿದ್ದ ವಿಶಿಷ್ಟ ಪೂಜಾ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಿದ್ದಾರೆ. ಪೂಜೆಯ ವಿಶೇಷವೆಂದರೆ ವಿಧವೆಯರಿಗೆ ಹರಿಶಿನ, ಕುಂಕುಮ ಹಾಗೂ ಹೊಸ ಸೀರೆಯನ್ನು ಕೊಟ್ಟು ಅವರಿಂದಲೇ ಗೋಕರ್ಣನಾಥೇಶ್ವರನ ಬೆಳ್ಳಿ ರಥವನ್ನು ಎಳೆಸುವ ಕಾರ್ಯಕ್ರಮಕ್ಕೆ ಇಂದು ನಿರೀಕ್ಷೆಗೂ ಮೀರಿ ಜನರು ಸೇರಿದ್ದಾರೆ. ಸಂಘಟಿಕರು ಸುಮಾರು ಒಂದೂವರೆ ಸಾವಿರ ಜನರು ಬರಬಹುದೆಂದು ನಿರೀಕ್ಷೆ ಇಟ್ಟು ಕೊಂಡಿದ್ದರು. ಆದರೆ ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಜನರು ಸೇರಿದ್ದಾರೆಂದು ತಿಳಿದು ಬಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry