ಕುಪ್ಪಳಿಯಲ್ಲಿ ಕುವೆಂಪು ಸಾಹಿತ್ಯ ಶಿಬಿರ

7

ಕುಪ್ಪಳಿಯಲ್ಲಿ ಕುವೆಂಪು ಸಾಹಿತ್ಯ ಶಿಬಿರ

Published:
Updated:

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ಕುವೆಂಪು ಹುಟ್ಟುಹಬ್ಬದ ಪ್ರಯುಕ್ತ ಇದೇ 29 ಮತ್ತು 30ರಂದು ಕುವೆಂಪು ಸಾಹಿತ್ಯದ ಕುರಿತು ಎರಡು ದಿನಗಳ ಶಿಬಿರವನ್ನು ಕುಪ್ಪಳಿಯಲ್ಲಿ ಆಯೋಜಿಸಿದೆ.ಆಹ್ವಾನಿತ ಸಂಪನ್ಮೂಲ ವ್ಯಕ್ತಿಗಳ ಜತೆಗೆ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ನಾಗತಿಹಳ್ಳಿ ಚಂದ್ರಶೇಖರ್ ಶಿಬಿರದಲ್ಲಿ ಉಪಸ್ಥಿತರಿರುವರು.ಆಸಕ್ತರು 100 ರೂಪಾಯಿ ನೋಂದಣಿ ಶುಲ್ಕವನ್ನು ಮನಿಯಾರ್ಡರ್ ಮೂಲಕ ಕಳುಹಿಸಿಕೊಡಬೇಕು. ಮೊದಲು ಬಂದವರಿಗೆ ಆದ್ಯತೆ. 100 ಜನರಿಗೆ ಮಾತ್ರ ಪ್ರವೇಶ. ಊಟ-ವಸತಿ ಉಚಿತ.ವಿವರಗಳಿಗೆ ಸಂಪರ್ಕಿಸಿ: ಕಡಿದಾಳ್ ಪ್ರಕಾಶ್, ಸಮ ಕಾರ್ಯದರ್ಶಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ, ದೇವಂಗಿ ಅಂಚೆ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ದೂರವಾಣಿ ಸಂ. 08181 274120.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry