ಶನಿವಾರ, ನವೆಂಬರ್ 23, 2019
18 °C

ಕುಪ್ಪಳಿಯಲ್ಲಿ ಮಕ್ಕಳ ರಾಜ್ಯಮಟ್ಟದ ರಂಗ ತರಬೇತಿ ಶಿಬಿರ

Published:
Updated:

ಶಿವಮೊಗ್ಗ: ಸಾಗರದ ಸ್ಪಂದನ ಸಂಸ್ಥೆ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಮೇ 10ರಿಂದ 19ರ ವರೆಗೆ ಕುಪ್ಪಳಿಯಲ್ಲಿ ಮಕ್ಕಳ ರಾಜ್ಯಮಟ್ಟದ ರಂಗತರಬೇತಿ ಬೇಸಗೆ ಶಿಬಿರ ಆಯೋಜಿಸಿದೆ ಎಂದು ರೈತ ಮುಖಂಡ ಕಡಿದಾಳು ಶಾಮಣ್ಣ ತಿಳಿಸಿದರು.ಶಿಬಿರದಲ್ಲಿ 10ರಿಂದ 14 ವರ್ಷದ 50 ಮಕ್ಕಳು ಭಾಗವಹಿಸಬಹುದು. ಶಿಬಿರದಲ್ಲಿ ಮಕ್ಕಳಿಗೆ ರಂಗದ ಆಯಾಮಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.ಸ್ಪಂದನ ಸಂಸ್ಥೆಯ ಪ್ರತಿಭಾ ರಾಘವೇಂದ್ರ ಮಾತನಾಡಿ, ಹೊಸ ತಂತ್ರಜ್ಞಾನಗಳು ಮಕ್ಕಳ ಸೂಕ್ಷ್ಮ ಸಂವೇದನೆಗಳನ್ನು ಕುಬ್ಜಗೊಳಿಸಿವೆ. ರಂಗತರಬೇತಿ ಶಿಬಿರದ ಮೂಲಕ ಮಕ್ಕಳ ಕನಸುಗಳಿಗೆ ರೆಕ್ಕೆ ಕಟ್ಟುವ ಪ್ರಯತ್ನ ಮಾಡಲಾಗುವುದು. ಕುವೆಂಪು ಅವರ ಕೃತಿಗಳನ್ನು ಆಧರಿಸಿ ರಂಗ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಶಿಬಿರದಲ್ಲಿ ಮಕ್ಕಳಿಗಾಗಿ ನಮ್ಮ ಭಾಷೆ, ನಡವಳಿಕೆ, ಸಾಮಾಜಿಕ ಜವಾಬ್ದಾರಿ, ವ್ಯಕ್ತಿತ್ವ ವಿಕಸನ, ಆರೋಗ್ಯ, ಕಾನೂನು ಮಾಹಿತಿ, ಸಂಗೀತ, ಸಾಹಿತ್ಯ, ನೃತ್ಯ, ಆಟ, ಸಿನೆಮಾ ಪ್ರದರ್ಶನದಬಗ್ಗೆ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.ಕಡಿದಾಳು ಶಾಮಣ್ಣ ಶಿಬಿರದ ಮಾರ್ಗದರ್ಶನ ಮಾಡುವರು. ಕೊನೆದಿನ ಮಕ್ಕಳ ನಾಟಕ ಪ್ರದರ್ಶನ ನಡೆಯಲಿದೆ. ಮಾಹಿತಿಗೆ ಹಾಗೂ ಹೆಸರು ನೋಂದಾಯಿಸಲು ಮೊಬೈಲ್: 99451 31508, 94485 31058 ಸಂಪರ್ಕಿಸಬಹುದು ಎಂದರು.

ಪ್ರತಿಕ್ರಿಯಿಸಿ (+)