ಕುಮಟಾ-ಹೊನ್ನಾವರ ರೈತರಿಂದ ಕೃಷಿ ಪ್ರವಾಸ

7

ಕುಮಟಾ-ಹೊನ್ನಾವರ ರೈತರಿಂದ ಕೃಷಿ ಪ್ರವಾಸ

Published:
Updated:

ಕುಮಟಾ: ಜಲಾನಯನ ಇಲಾಖೆವತಿಯಿಂದ ಕುಮಟಾ ಹಾಗೂ ಹೊನ್ನಾವರ ತಾಲ್ಲೂಕಿನ ಸುಮಾರು 90 ರೈತರು ಶುಕ್ರವಾರ ರಾಜ್ಯದ ಸುಮಾರು 5 ಜಿಲ್ಲೆಗಳಿಗೆ 3 ದಿನಗಳ ಕೃಷಿ ಪ್ರವಾಸ ಕೈಕೊಂಡರು.ಕುಮಟಾ ಹಾಗೂ ಹೊನ್ನಾವರ ತಾಲ್ಲೂಕುಗಳಿಂದ 90 ಜನ ರೈತರು ಹಾಗೂ 10 ಜನ ಜಲಾನಯನ ಸಿಬ್ಬಂದಿ ಹೊತ್ತ ಎರಡು ಬಸ್‌ಗಳು ಕುಮಟಾ ಮಹತ್ಮಾಗಾಂಧಿ ಮೈದಾನದಿಂದ ಕೃಷಿ ಪ್ರವಾಸಕ್ಕೆ ಹೊರಟಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ವೀಣಾ ನಾಯ್ಕ ಪ್ರವಾಸ ಕೈಕೊಂಡ ರೈತರಿಗೆ ಕುಡಿಯುವ ನೀರು ಪೂರೈಸಿ ಪ್ರವಾಸಕ್ಕೆ ಹಸಿರು ನೀಶಾನೆ ತೋರಿಸಿದರು.‘ಕುಮಟಾ ಹಾಗೂ ಹೊನ್ನಾವರದ ಆಸಕ್ತ ರೈತರು ಮಾದರಿ ಜಲಾನಯನ ಪ್ರದೇಶ ಹಾಗೂ ಕೃಷಿ ಸಂಬಂಧಿ ಮಾಹಿತಿ ಪಡೆಯಲು, ಬಾದಾಮಿ, ಗುಲಬರ್ಗಾ, ಪಟ್ಟದಕಲ್ಲು ಹಾಗೂ ವಿಜಾಪುರ ಸೇರದಿಂತೆ ಐದಾರು ಜಿಲ್ಲೆಗಳಲ್ಲಿ ಪ್ರವಾಸ ಕೈಕೊಳ್ಳಲಿದ್ದು ಸೋಮವಾರ ವಾಪಸು ಬರಲಿದ್ದಾರೆ. ರೈತರ ಪ್ರವಾಸ ಹಾಗೂ ಊಟ, ತಿಂಡಿಯ ವೆಚ್ಚವನ್ನು ಜಲಾನಯನ ಇಲಾಖೆಯೇ ಭರಸಿಲಿದೆ’ ಎಂದು ಜಲಾನಯನ ಅಧಿಕರಿ ಜೆ.ಎನ್. ನಾಯ್ಕ ತಿಳಿಸಿದರು.ಈ ಸಂದರ್ಭದಲ್ಲಿ ಪಂಚಾಯತಿ ಅಧ್ಯಕ್ಷ ಹನುಮಂತ ಪಟಗಾರ, ಸದಸ್ಯ ಜಿ.ಎಸ್. ಭಟ್ಟ ಜಲಾನಯನ ಅಧಿಕಾರಿಗಳಾದ ಆರ್.ಬಿ. ಗಾಂವ್ಕರ್, ಭಗವಾನದಾಸ್, ಶ್ರೀಧರ ನಾಯ್ಕ ಹಾಗೂ ಎಂ.ಜೆ. ಗೌಡ ಮೊದಲಾದವರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry