ಕುಮಾರಸ್ವಾಮಿಯೇ ಜೆಡಿಎಸ್‌ನ ಮುಖ್ಯಮಂತ್ರಿ ಅಭ್ಯರ್ಥಿ: ಸಿಂಧ್ಯಾ ಘೋಷಣೆ

7

ಕುಮಾರಸ್ವಾಮಿಯೇ ಜೆಡಿಎಸ್‌ನ ಮುಖ್ಯಮಂತ್ರಿ ಅಭ್ಯರ್ಥಿ: ಸಿಂಧ್ಯಾ ಘೋಷಣೆ

Published:
Updated:
ಕುಮಾರಸ್ವಾಮಿಯೇ ಜೆಡಿಎಸ್‌ನ ಮುಖ್ಯಮಂತ್ರಿ ಅಭ್ಯರ್ಥಿ: ಸಿಂಧ್ಯಾ ಘೋಷಣೆ

ಬೆಂಗಳೂರು (ಪಿಟಿಐ): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ (ಜೆಡಿಎಸ್) ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್‌ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಮಂಗಳವಾರ ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಧ್ಯಾ ಅವರು `ಜೆಡಿಎಸ್‌ನಲ್ಲಿ  ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಗಳಿಲ್ಲ. ಕುಮಾರಸ್ವಾಮಿ ಅವರನ್ನು ಪಕ್ಷದ ವತಿಯಿಂದಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ದೇವೇಗೌಡರ ಸ್ವಹಿತಾಸಕ್ತಿ ಇಲ್ಲ~ ಎಂದು ತಿಳಿಸಿದರು.`ಕುಮಾರಸ್ವಾಮಿ ಅವರು ಅತ್ಯಂತ ಜನಪ್ರೀಯ ನಾಯಕರಾಗಿದ್ದು, ಅವರಿಗೆ ಅಪಾರ ಜನ ಬೆಂಬಲವಿದೆ~ ಎಂದ ಸಿಂಧ್ಯಾ, `ನಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ~ ಎಂದು ಸ್ಪಷ್ಟಪಡಿಸಿದರು.ಇತ್ತೀಚೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್‌ನಲ್ಲಿ ಕುಮಾರಸ್ವಾಮಿಗಿಂತ ಸಾಕಷ್ಟು  ಹಿರಿಯರು ನಾಯಕರಿದ್ದು ಅವರಲ್ಲಿ ಒಬ್ಬರನ್ನು ದೇವೇಗೌಡರು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಲಿ ಎಂದು ದೇವೇಗೌಡರಿಗೆ ಸವಾಲು ಹಾಕಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry