ಕುಮಾರಸ್ವಾಮಿ: ಆರೋಪಗಳ ವಜಾಕ್ಕೆ ಕಾರ್ಯಕರ್ತರ ಸಂಭ್ರಮ

7

ಕುಮಾರಸ್ವಾಮಿ: ಆರೋಪಗಳ ವಜಾಕ್ಕೆ ಕಾರ್ಯಕರ್ತರ ಸಂಭ್ರಮ

Published:
Updated:

ಚನ್ನಪಟ್ಟಣ: ಜಂತಕಲ್ ಮೈನಿಂಗ್ಸ್ ಮತ್ತು ವಿಶ್ವಭಾರತಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ತಾಲೂಕು ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ,  ಕೆಲಮಂದಿ ರಾಜಕೀಯ ಪಿತೂರಿಯಿಂದ ದಾಖಲಿಸಿದ ಪ್ರಕರಣವನ್ನು ವಜಾಗೊಳಿಸುವ ಮೂಲಕ ನ್ಯಾಯಾಲಯ ಅವರ ಚಾರಿತ್ರವನ್ನು ಎತ್ತಿ ಹಿಡಿದಿದೆ ಎಂದರು.ಇವರ ವಿರುದ್ದ ಸುಳ್ಳು ಮೊಕದ್ದಮೆ ದಾಖಲಿಸಿ ಜನತೆಯಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ನಡೆಸಿದ ಪ್ರಯತ್ನ ವಿಫಲಗೊಂಡಿದ್ದು ಇನ್ನಾದರು ವಿಪಕ್ಷದ ನಾಯಕರು ಇಂತಹ ಪ್ರಯತ್ನವನ್ನು ಕೈ ಬಿಡಲಿ ಎಂದು ತಿಳಿಸಿದರು.ಮುಖಂಡರಾದ ಎಂ.ಎನ್. ಸತ್ಯನಾರಾಯಣ, ಈಶ್ವರಪ್ಪ, ನಿಂಗೇಗೌಡ, ಎಂಜಿಕೆ ಸತೀಶ್, ಉಮಾಶಂಕರ್, ಮೆಹರೀಶ್, ಎ.ವಿ.ಹಳ್ಳಿ ಪ್ರಕಾಶ್, ಕೋಡಂಬಹಳ್ಳಿ ನಾಗರಾಜು ಮುಂತಾದವರು ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry