ಕುಮಾರಸ್ವಾಮಿ ದಂಪತಿಗೆ ಸಮನ್ಸ್ ಜಾರಿ

7

ಕುಮಾರಸ್ವಾಮಿ ದಂಪತಿಗೆ ಸಮನ್ಸ್ ಜಾರಿ

Published:
Updated:
ಕುಮಾರಸ್ವಾಮಿ ದಂಪತಿಗೆ ಸಮನ್ಸ್ ಜಾರಿ

 

ಬೆಂಗಳೂರು(ಪಿಟಿಐ):  ಕಾನೂನು ಗಾಳಿಗೆ ತೂರಿ ಖಾಸಗಿ ಕಂಪನಿಗೆ ಗಣಿಗಾರಿಕೆಗೆ ಮತ್ತು  ಖಾಸಗಿ ಹೌಸಿಂಗ್ ಸೊಸೈಟಿಗೆ ಕಾನೂನು ಉಲ್ಲಂಘಿಸಿ ಭೂಮಿ ಮಂಜೂರು ಮಾಡಿದ  ಪ್ರಕರಕಣ ಕುರಿತಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಇತರ ಇಬ್ಬರಿಗೆ  ಲೋಕಾಯುಕ್ತ ನ್ಯಾಯಾಲಯ  ಸೋಮವಾರ ಸಮನ್ಸ್ ಜಾರಿ ಮಾಡಿದ್ದು ಆಗಸ್ಟ್ 30ರೊಳಗೆ ಹಾಜಾರುಗುವಂತೆ ಆದೇಶಿಸಿದೆ.ಕುಮಾರಸ್ವಾಮಿ ಅವರು, ಕಾನೂನು ಉಲ್ಲಂಘಿಸಿ ಜಂತಕಲ್ ಕಂಪನಿಗೆ ಮೈನಿಂಗ್ ಲೈಸೆನ್ಸ್  ನೀಡಿದ್ದಾರೆ, ಖಾಸಗಿ ಹೌಸಿಂಗ್  ಸೊಸೈಟಿಗೆ ಭೂಮಿ ಮಂಜೂರು ಮಾಡಿದ್ದಾರೆಂದು  ಆರೋಪಿಸಿ ವಕೀಲ ವಿನೋದ್ ಕುಮಾರ್ ಅವರು ಖಾಸಗಿ ದೂರು ದಾಖಲಿಸಿದ್ದರು.ಈ ದೂರನ್ನು ಆಲಿಸಿದ ವಿಶೇಷ ನ್ಯಾಯಾಧೀಶರಾದ ಸುಧೀಂದರ್ ರಾವ್ ಅವರು ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಜಂತಕಲ್ ಎಂಟರ್ ಪ್ರೈಸಸ್ ಸಂಸ್ಥೆಗೆ ಸಮನ್ಸ್ ಜಾರಿಗೊಳಿಸಿದೆ.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry