`ಕುಮಾರಸ್ವಾಮಿ ಪರ ವಕಾಲತ್ತು ವಹಿಸಿಕೊಂಡು ಬಂದಿಲ್ಲ'

7

`ಕುಮಾರಸ್ವಾಮಿ ಪರ ವಕಾಲತ್ತು ವಹಿಸಿಕೊಂಡು ಬಂದಿಲ್ಲ'

Published:
Updated:

ರಾಯಚೂರು: ರಾಜ್ಯವನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರಿಗೆ ಕೈಮುಗಿತ್ತಿದ್ದೇನೆ. ಆದರೆ, ಕುಮಾರಸ್ವಾಮಿ ಅವರ ಪರ ವಕಾಲತ್ತು ವಹಿಸಿಕೊಂಡು ಬಂದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಅವರು ಹೇಳಿದರು.ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜೆಡಿಎಸ್ ಜಿಲ್ಲಾ ಘಟಕದವತಿಯಿಂದ ಬುಧವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರಿಗೂ ಅಧಿಕಾರ ದೊರಕಬೇಕು ಎಂಬ ಉದ್ದೇಶ ಹೊಂದಲಾಗಿದೆ. ಜೆಡಿಎಸ್ ಪಕ್ಷ ಅಪ್ಪ ಮಕ್ಕಳ ಪಕ್ಷವೆಂದು ಆರೋಪಿಸಲಾಗುತ್ತಿದೆ.ಆದರೆ, ದೇಶದ ವಿವಿಧ ರಾಜ್ಯಗಳಲ್ಲಿಯೂ ರಾಜಕಾರಣಿಗಳಲ್ಲಿ ಕುಟುಂಬದ ಸದಸ್ಯರಿಲ್ಲ. ಕರ್ನಾಟಕ ಜನತಾ ಪಕ್ಷದಲ್ಲಿಯೂ ಕುಟುಂಬ ಸದಸ್ಯರಿಲ್ಲವೇ ಎಂದು ಪ್ರಶ್ನಿಸಿದರು.ಚುನಾವಣೆಗಳ ಸ್ಪರ್ಧಿಸಲು ಪ್ರತಿಯೊಬ್ಬರು ಹಕ್ಕು ಹೊಂದಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಯಾವುದೇ ಒಂದು ಜಾತಿಯ ಪಕ್ಷವಲ್ಲ. ರಾಜ್ಯದ ಅಭಿವೃದ್ಧಿಗೆ ಉತ್ತಮ ನಾಯಕನ್ನು ನೀಡಿ, ಕಣ್ಣುತುಂಬಾ ನೋಡಬೇಕು ಎಂಬ ಆಸೆಭಾವನೆಯನ್ನು ಹೊಂದಿದ್ದೇನೆ ಎಂದು ತಿಳಿಸಿದರು.ತಮ್ಮ ಗಮನಕ್ಕೆ ತರದೇ ಕುಮಾರಸ್ವಾಮಿ ಅವರು ಬಿಜೆಪಿ ಪಕ್ಷದೊಂದಿಗೆ ಅಧಿಕಾರಿ ನಡೆಸಿರುವುದು ತಪ್ಪು ಹೆಜ್ಜೆ ಇಟ್ಟಿದ್ದಾನೆ.ತಮ್ಮ ಜೀವನದಲ್ಲಿಯೇ ಇಂಥ ಹದಗೆಟ್ಟ ಆಡಳಿತವನ್ನು ನೋಡಿಲ್ಲ. ಜಿಲ್ಲೆಯ ನಾರಾಯಪುರ ಬಲದಂಡೆ ಕಾಲುವೆ 95ರಿಂದ 157 ಕಿಮೀ ವಿಸ್ತರಣೆ ಕಾಮಗಾರಿಯನ್ನು ಸರ್ಕಾರ ಕೈಗೊಂಡಿಲ್ಲ ಎಂದು ದೂರಿದರು.ರೈತರ ಅಭಿವೃದ್ಧಿಗಾಗಿ  ಹಾಗೂ ರಾಜ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರ ಕಾರ್ಯಕರ್ತರು ಪಕ್ಷದ ಸಂಘಟನೆಗಾಗಿ ಶ್ರಮಿಸಬೇಕು. ಪಕ್ಷದಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ಉದ್ದೇಶದಿಂದಲೇ ಪ್ರವಾಸ ಕೈಗೊಂಡಿರುವುದಾಗಿ ಹೇಳಿದರು.ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ ಮಾತನಾಡಿ, ದೇವೇಗೌಡರಿಗೆ ರೈತರ ಬಗ್ಗೆ ಕಾಳಜಿಯಿಂದಲೇ ಕೃಷ್ಣಭಾಗ್ಯ ಜಲನಿಗಮ ಯೋಜನೆಯ ಕೈಗೊಂಡ ಹಿನ್ನೆಲೆಯಲ್ಲಿ ಅನೇಕ ರೈತರ ಜಮೀನುಗಳು ನೀರಾವರಿಯಾಗಿವೆ. ಜಿಲ್ಲೆಯಲ್ಲಿ ಎರಡು ನದಿಗಳಿದ್ದರೂ ಉಪಯೋಗಪಡೆಯಲು ಕುಮಾರಸ್ವಾಮಿ ಅವರ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಹೇಳಿದರು.ಮಾಜಿ ಸಚಿವ ಎಂ.ಎಸ್ ಪಾಟೀಲ್ ಮಾತನಾಡಿ, ತಾವು ಪಕ್ಷದ ಅಭ್ಯರ್ಥಿ ಆಕಾಂಕ್ಷಿಲ್ಲ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುವುದು ಸಹಜ. ರಾಯಚೂರು ನಗರ ಕ್ಷೇತ್ರದಿಂದ ಕುಮಾರಸ್ವಾಮಿ ಅವರೇ ಸ್ಪರ್ಧಿಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಅಧ್ಯಕ್ಷತೆವಹಿಸಿದ್ದ ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ಮಾತನಾಡಿ, ಎಲ್ಲ ಪಕ್ಷಗಳಲ್ಲಿ ಇರುವಂಥ ನಮ್ಮ ಪಕ್ಷದಲ್ಲಿಯೂ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ರಾಯಚೂರು ನಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿವೆ. ಚುನಾವಣೆ ಸಂದರ್ಭದಲ್ಲಿ ಇಂಥ ಭಿನ್ನಾಭಿಪ್ರಾಯಗಳು ಸರ್ವೆ          ಸಾಮಾನ್ಯ. ಪಕ್ಷದ ಯಾವುದೇ ಅಭ್ಯರ್ಥಿಯನ್ನು ಸ್ಪರ್ಧಿಸಿದರೂ ಪ್ರತಿಯೊಬ್ಬ ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಜಿಲ್ಲಾ ವಕ್ತಾರ ಎಂ.ವಿರುಪಾಕ್ಷಿ ಮಾತನಾಡಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಶಿವರಾಜ ಪಾಟೀಲ್, ಮುಖಂಡರಾದ ಈ.ಆಂಜನೇಯ, ಅಮರಗುಂಡಪ್ಪ,ಜಿಲ್ಲಾ ಕಾರ್ಯಾಧ್ಯಕ್ಷ ಯೂಸೂಫ್ ಖಾನ್, ಜಿಲ್ಲಾ ಪಂಚಾಯಿತಿ ಸದಸ್ಯ ದಾನಪ್ಪ ಆಲ್ಕೋಡ್, ನಗರಸಭೆ ಸದಸ್ಯರಾದ ಬಿ.ತಿಮ್ಮಾರೆಡ್ಡಿ, ಯಲ್ಲಪ್ಪ, ಎಂ.ಪವನಕುಮಾರ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾವೆಂಕಟಪ್ಪ ನಾಯಕ, ಪ್ರಿಯಾ ಪ್ರಕಾಶ ಹಾಗೂ ಇತರರಿದ್ದರು. ದಾನಪ್ಪ ಯಾದವ್ ಸ್ವಾಗತಿಸಿದರು. ಎನ್.ಶಿವಶಂಕರ ವಕೀಲ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry