ಕುಮಾರ ಶ್ರೀ ಜ್ಯೋತಿಯಾತ್ರೆಗೆ ಭವ್ಯ ಸ್ವಾಗತ

7

ಕುಮಾರ ಶ್ರೀ ಜ್ಯೋತಿಯಾತ್ರೆಗೆ ಭವ್ಯ ಸ್ವಾಗತ

Published:
Updated:

ಸಂಡೂರು: ಹಾನಗಲ್ ಕುಮಾರ ಶಿವಯೋಗಿಗಳ 146ನೇ ಜಯಂತಿ ಮಹೋತ್ಸವದ ಅಂಗವಾಗಿ ಶಿವಯೋಗ ಮಂದಿರದಿಂದ ಆಗಮಿಸಿರುವ ಜ್ಯೋತಿ­ಯನ್ನು ತಾಲ್ಲೂಕಿನ ತಾಳೂರು ಗ್ರಾಮದಲ್ಲಿ ಮಂಗಳವಾರ ಭಕ್ತರು ಶ್ರದ್ಧಾ ಭಕ್ತಿಯಿಂದ ಸ್ವಾಗತಿಸಿದರು.‘ಪುಣ್ಯದ ಜೋಳಿಗೆ ದುಶ್ಚಟಗಳನ್ನು ದೂರ ಮಾಡುವ ಹಾದಿಗೆ’ ಎಂಬ ಘನ ಉದ್ದೇಶದೊಂದಿಗೆ ಆರಂಭಿಸಲಾಗಿರುವ ಜ್ಯೋತಿ ಯಾತ್ರೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿವಯೋಗ ಮಂದಿರ ಸಂಸ್ಥೆಯ ಅಧ್ಯಕ್ಷ ಸಂಗನಬಸವ ಸ್ವಾಮೀಜಿ, ’ಇಂದು ಸಮಾಜ ಕಟ್ಟುವ ಕಾಯಕದಲ್ಲಿ ತೊಡಗಿಕೊಳ್ಳಬೇಕಿದ್ದ ಯುವ ಜನತೆ ದುಶ್ಚಟ ಹಾಗೂ ಮಾದಕ ವ್ಯಸನಗಳಿಗೆ ಬಲಿಯಾಗಿ, ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವುದು ಹೆಚ್ಚುತ್ತಿದೆ. ಇದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ. ಆದ್ದರಿಂದ ಯುವ ಜನತೆ ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯವನ್ನು ಹೊಂದಿ, ಸಮಾಜ ಹಾಗೂ ನಾಡು ಕಟ್ಟುವ ಕಾರ್ಯಗಳಲ್ಲಿ ತೊಡಗಿ­ಸಿಕೊಳ್ಳಬೇಕು’ ಎಂದು ಹೇಳಿದರು.ಡಾ. ಕರಿಬಸವರಾಜೇಂದ್ರಸ್ವಾಮೀಜಿ, ಕಲ್ಯಾಣ ಸ್ವಾಮೀಜಿ, ನಾಗ­ಲಾಪುರದ ಮರಿ ಮಹಾಂತ ಸ್ವಾಮೀಜಿ, ಕುಮಾರ­ದೇವರು, ಆಸುಂಡಿ ನಾಗರಾಜಗೌಡ, ಮಲ್ಲನಗೌಡ, ಬಸವರಾಜ ಹಿರೇಮಠ, ತಾಳೂರು ಗ್ರಾಮದ ವೀರಶೈವ ಜಾಗೃತಿ ಸೇವಾ ಸಮಿತಿಯ ಅಧ್ಯಕ್ಷ ಕೆ.ಷಡಾಕ್ಷರಿ, ಷಡಾಕ್ಷರಯ್ಯಸ್ವಾಮಿ, ವೃಷಬೇಂದ್ರಯ್ಯ ಸ್ವಾಮಿ, ಸೂಗಪ್ಪ, ಎಸ್.ನಾಗರಾಜ, ರಾಜಶೇಖರಗೌಡ, ಬಸಾಪುರದ ವೀರನ­ಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry