ಶನಿವಾರ, ಏಪ್ರಿಲ್ 17, 2021
30 °C

ಕುರಿಗಾರರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ: ಪ್ರಕೃತಿ ವಿಕೋಪಕ್ಕೆ ಬಲಿಯಾದ ಕುರಿ ಹಾಗೂ ಮೇಕೆಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಸಂಗೊಳ್ಳಿ ರಾಯಣ್ಣ ಕುರಿ ಸಂಗೋಪನಾ ಹಾಗೂ ಉಣ್ಣೆ ಉತ್ಪಾದನಾ ಸಹಕಾರ ಸಂಘದ ಕಾರ್ಯಕರ್ತರು ತಹಶೀಲ್ದಾರರಿಗೆ ಬುಧವಾರ ಮನವಿ ಸಲ್ಲಿಸಿದರು.ಕಳೆದ ನಾಲ್ಕೈದು ದಿನಗಳ ಹಿಂದೆ ಸುರಿದ ಭಾರಿ ಮಳೆ ಹಾಗೂ ಗಾಳಿಯಿಂದ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಸುಮಾರು 500-600 ಕುರಿ ಹಾಗೂ ಮೇಕೆಗಳು ಸಾವನ್ನಪ್ಪಿದ್ದು, ಸರಕಾರ ಪ್ರಕೃತಿ ವಿಕೋಪ ನಿಧಿಯಿಂದ ತಕ್ಷಣ ನೊಂದ ಕುರಿಗಾರರಿಗೆ ಸೂಕ್ತ ಪರಿಹಾರ ವಿತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ತಾಲ್ಲೂಕಿನಲ್ಲಿ ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ಕುರಿಗಳಿದ್ದು, ಬಹುತೇಕ ಬಡ ಕುರಿಗಾರರು ಕುರಿ ಸಾಕಾಣಿಕೆಯನ್ನೆ ಅವಲಂಬಿಸಿದ್ದಾರೆ. ತಾಲ್ಲೂಕು ಈಗಾಗಲೇ ತೀವ್ರ ಬರಗಾಲದಿಂದ ತತ್ತರಿಸುತ್ತಿದ್ದು, ಜನ ಜಾನುವಾರುಗಳು ಪರದಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಕಾಲಿಕ ಮಳೆ ಯಂತಹ ಪ್ರಕೃತಿ ವಿಕೋಪ ಸಂಭವಿಸಿ   ದರೆ ಬಡ ಕುರಿಗಾರರು ಏನು ಮಾಡ ಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.ಸರಕಾರ ಬಡ ರೈತರಿಗೆ ಹಾಗೂ ಬಡ ನೇಕಾರರಿಗೆ ನೀಡುವಂತೆ ಶೇಕಡಾ 3ರ ಬಡ್ಡಿ ದರದಲ್ಲಿ ಕುರಿಗಾರರಿಗೂ ಸಾಲ ನೀಡಬೇಕು. ಕುರಿಗಾರರು ತಮ್ಮ ಕುರಿ ಹಾಗೂ ಮೇಕೆಗಳನ್ನು ಮೇಯಿಸಲು ಸದಾ ಅಲೆಮಾರಿಗಳಂತೆ ಕಾಡು ಮೇಡು ಅಲಿಯಬೇಕಾಗಿದ್ದು, ಬಹುತೇಕ ಕುರಿ ಗಾರರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಅಲೆಮಾರಿ ಕುರುಬ ಕುಟುಂಬದ ಮಕ್ಕಳ ಶಿಕ್ಷಣಕ್ಕಾಗಿ ಸಂಚಾರಿ ಶಾಲೆಗಳನ್ನು ತೆರೆ ಯಬೇಕು ಎಂದು ಒತ್ತಾಯಿಸಿದ್ದಾರೆ.ತಹಸೀಲ್ದಾರ ಎ.ಟಿ.ನರೇಗಲ್ ಮನವಿ ಸ್ವೀಕರಿಸಿ ಹಿರಿಯ ಅಧಿಕಾರಿ ಗಳೊಂದಿಗೆ ಚರ್ಚಿಸಿ ಕುರಿಗಾರರ ಸಮ ಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಾಗು ವುದು ಎಂದು ಭರವಸೆ ನೀಡಿದರು. ಸಂಘದ ಅಧ್ಯಕ್ಷ ರಾಮಚಂದ್ರ ಬದಾಮಿ, ನಿಂಗಪ್ಪ ಗುಡ್ಡದ, ವೀರಣ್ಣ ಮದ್ದೀನ, ಹಾಲಪ್ಪ ಹರ್ತಿ, ಮೈಲಾರೆಪ್ಪ ಶೀರನಹಳ್ಳಿ, ತಿಪ್ಪಣ್ಣ ಭಜಮ್ಮನವರ, ಗುಡದಯ್ಯ ಯಳವತ್ತಿ, ಹೇಮಣ್ಣ ಗೌಡರ, ದೇವಪ್ಪ ಡಂಬಳ, ರಮೇಶ ಮುದಿಯಜ್ಜನವರ, ವೆಂಕಪ್ಪ ಲಮಾಣಿ, ವೀರಪ್ಪ ಕುಪ್ಪಲವರ, ಹನುಮಪ್ಪ ಸಜ್ಜೇರಿ, ದೇವಪ್ಪ ಗಟ್ಟೆಪ್ಪನವರ ಮೊದಲಾದವರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.